Breaking News

ಅಮಿತಾಬ್ ಬಚ್ಚನ್ ಮನೆಗೆ ನುಗ್ಗಿದ ನೀರು -ಜಲಾವೃತಗೊಂಡ ಪ್ರತೀಕ್ಷಾ!

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಮಳೆಯ ಹಿನ್ನೆಲೆ ಸಂಪೂರ್ಣ ಮುಂಬೈ ಜಲಾವೃತವಾಗಿದ್ದು ಸರ್ಕಾರಿ ಕಚೇರಿಗಳ ಬಾಗಿಲಿಗೆ ಬೀಗ ಹಾಕಲಾಗಿದೆ. ಖಾಸಗಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಕೂಡ ಹೇಳಲಾಗಿದೆ.ಇನ್ನು ಪ್ರಕೃತಿಯ ಮುಂದೆ ಯಾರು ನಿಲ್ಲಲಾರರು. ಪ್ರಕೃತಿಗೆ ಶ್ರೀಮಂತ ಮತ್ತು ಬಡವ ಎಂಬ ಭೇದ ಭಾವ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಭಾರತದ ಮಹಾನಾಯಕ ”ಅಮಿತಾಬ್ ಬಚ್ಚನ್” ಅವರ ಮನೆ ”ಪ್ರತೀಕ್ಷಾ” ಜಲಾವೃತಗೊಂಡಿದೆ. ”ಸಾಗರ್ ಠಾಕೂರ್” ಎಂಬ ವ್ಲಾಗರ್ ಮಳೆಯಲ್ಲಿಯೇ ಮುಂಬೈ ಪ್ರದಕ್ಷಣೆಯನ್ನು ಮಾಡಿದ್ದು ”ಜುಹು”ದಲ್ಲಿರುವ ”ಅಮಿತಾಬ್ ಬಚ್ಚನ್” ಅವರ ಮನೆ ”ಪ್ರತೀಕ್ಷಾ” ಎದುರು ನಿಂತು ವಿಡಿಯೋ ಮಾಡಿದ್ದಾರೆ.ಅಂದ್ಹಾಗೇ ಅಮಿತಾಬ್ ಬಚ್ಚನ್ ”ಜುಹು”ನಲ್ಲಿರುವ ಈ ಭವ್ಯ ಬಂಗಲೆಯನ್ನು 1976ರಲ್ಲಿ ಖರೀದಿಸಿದ್ದರು. ಅಮಿತಾಬ್ ಬಚ್ಚನ್ ಅವರ ತಂದೆ ಹರಿವಂಶ್ ರಾಯ್ ಮನೆಗೆ ಪ್ರೀತಿಕ್ಷಾ ಎಂದು ಹೆಸರಿಟ್ಟಿದ್ದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *