Breaking News

ರೈಲ್ವೆ ಬ್ರಿಡ್ಜ್​ ನಿರ್ಮಾಣಕ್ಕೆಂದು ತೋಡಿದ್ದ ಗುಂಡಿಗೆ ಬಿದ್ದು ನಾಲ್ವರು ಮಕ್ಕಳು ಸಾವು!

ಬ್ರಿಡ್ಜ್​​ ನಿರ್ಮಾಣಕ್ಕೆಂದು ತೋಡಿದ್ದ ಗುಂಡಿಯಲ್ಲಿ ನಾಲ್ವರು ಮಕ್ಕಳು ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ದರ್ವಾ ಪಟ್ಟಣದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಯೋಜನೆಗಾಗಿ ಅಗೆದಿದ್ದ ನೀರುತುಂಬಿದ ಗುಂಡಿಯಲ್ಲಿ ನಾಲ್ವರು ಅಪ್ರಾಪ್ತ ಬಾಲಕರು ಮುಳುಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ.ನಾಲ್ವರು ಮಕ್ಕಳು ರೆಹಾನ್ ಅಸ್ಲಾಂ ಖಾನ್ (13), ಗೋಲು ಪಾಂಡುರಂಗ್ ನರ್ನವಾರೆ (10), ಸೌಮ್ಯ ಸತೀಶ್ ಖಾಡ್ಸನ್ (10) ಮತ್ತು ವೈಭವ್ ಆಶಿಶ್ ಬೋಧ್ಲೆ (14) ಸ್ಥಳದ ಬಳಿ ಆಟವಾಡಲು ಹೋಗಿದ್ದರು. ಏನೂ ಆಗಲ್ಲ ಎನ್ನುವ ಉತ್ಸಾಹದಲ್ಲಿ ಅವರೇ ಗುಂಡಿಗೆ ಹಾರಿದ್ದರು. ಆಳದ ಅರಿವಿಲ್ಲದ ಹುಡುಗರು ಕಷ್ಟಪಟ್ಟಿದ್ದರು. ಬಳಿಕ ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ. ಸಹಾಯ ಮಾಡಲು ಸುತ್ತಲೂ ಯಾರೂ ಇಲ್ಲದ ಕಾರಣ, ನಾಲ್ವರೂ ದುರಂತವಾಗಿ ಮುಳುಗಿ ಸಾವನ್ನಪ್ಪಿದ್ದಾರೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *