ಕಲಘಟಗಿ : ರೈತರ ಆರೋಗ್ಯ ಮತ್ತು ಸಬಲತೆಗೆ ಹೈನುಗಾರಿಕೆ ಆರ್ಥಿಕ ಸಹಕಾರಿಯಾಗಿದೆ. ಹೈನುಗಾರಿಕೆ ಮಾಡಲು ಗ್ರಾಮೀಣ ಸಶಕ್ತರಾಗಿದ್ದು , ಮಹಿಳೆಯರು ವೈಜ್ಞಾನಿಕವಾಗಿ ಹೈನುಗಾರಿಕೆಯನ್ನು ಉದ್ದಿಮೆಯನ್ನಾಗಿ ಸಿಕೊಂಡಲ್ಲಿ ಆರ್ಥಿಕ ಸಬಲೀಕರಣವಾಗಲಿದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.
ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಹಾಲು ಕೇಂದ್ರದ ಕಟ್ಟಡಕ್ಕೆ ಸಂಸ್ಕರಣಾ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಮಾತನಾಡಿ , ದಾಸ್ತಿಕೊಪ್ಪದಲ್ಲಿರುವ ಸಹಕಾರಿ ಸಂಘಕ್ಕೆ 27 ಲಕ್ಷ ರೂ . ವೆಚ್ಚದಲ್ಲಿ ನಿರ್ಮಿಸಲಿರುವ ಒಟ್ಟು 3 , 000 ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಕೇಂದ್ರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಬಿಎಂಸಿ ಕಟ್ಟಡಕ್ಕೆ ಶಾಸಕ ಸಿ.ಎಂ.ನಿಂಬಣ್ಣವರ ಭೂಮಿಪೂಜೆ ನೆರವೇರಿಸಿದರು. ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ , ನಿರ್ದೇಶಕಿ ಗೀತಾ ಮರಲಿಂಗಣ್ಣವರ , ಹನುಮಂತಗೌಡ ತಳಬಾಗಿಲು ಇತರರಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news

