ಹುಬ್ಬಳ್ಳಿಯಲ್ಲಿ ದಿನಾಂಕ 24-08-2025 ರಂದು ಬೀದಿ ನಾಯಿಗಳ ಮತ್ತು ಸಮುದಾಯ ನಾಯಿಗಳಿಗೆ ದತ್ತು ಪಡೆಯುವ ಅಭಿಯಾನ ನಡೆಯಿತು.ಈ ಯೋಜನೆಯ ಉದ್ದೇಶ ಬೀದಿನಾಯಿಗಳಿಗೆ ಪ್ರೀತಿ ಹಾಗೂ ಸುರಕ್ಷಿತ ಮನೆಗಳನ್ನು ಒದಗಿಸುವ ಜೊತೆಗೆ ಸಾರ್ವಜನಿಕ ಆರೋಗ್ಯ ಹಾಗು ಪ್ರಾಣಿಂಕಿತ ಚಿಂತನೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ.ಈ ಕಾರ್ಯಕ್ರಮಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀಮತಿ ಜ್ಯೋತಿ ವಿನಯ ಪಾಟೀಲ ಮುಖ್ಯ ಅತಿಥಿಯಾಗಿ, ಮಾನ್ಯ ಉಪ ಮಹಾಪೌರರಾದ ಶ್ರೀ ಸಂತೋಷ ಚವ್ಹಾಣ,ಪಾಲಿಕೆ ಮ್ಯಾನ ಪ್ರತಿಪಕ್ಷ ನಾಯಕರಾದ ಶ್ರೀ ಇಮ್ರಾನ್ ಎಲಿಗಾರ, ಶ್ರೀ ರಾಜಣ್ಣ ಕೊರವಿ ಮ್ಯಾನ ಅಧ್ಯಕ್ಷರು ಸಾರ್ವಜನಿಕ ಆರೋಗ್ಯ ಶಿಕ್ಷಣ ವ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ,ಪಾಲಿಕೆಯ ಮಾಜಿ ಮಹಾಪೌರರಾದ ಶ್ರೀ ರಾಮಪ್ಪ ಬಡಿಗೇರ,ಮಾಜಿ ಉಪ ಮಹಾಪೌರರಾದ ಶ್ರೀಮತಿ ದುರ್ಗಮ್ಮ ಬೀಜವಾಡ,ಪಾಲಿಕೆಯ ಆಯುಕ್ತರಾದ ಡಾ|| ರುದ್ರೇಶ ಘಾಳಿ ಹಾಗೂ ಸದ್ಯಸರಾದ ಶ್ರೀಮತಿ ಪ್ರೀತಿ ಖೋಡೆ,ಆರೋಗ್ಯ ಅಧಿಕಾರಿಗಳಾದ ಡಾ|| ಶ್ರೀಧರ ದಂಡಪ್ಪನವರ,ಪಾಲಿಕೆಯ ಅಧಿಕಾರಿಗಳಾದ ಶ್ರೀ ಉಮೇಶ ಸವಣೂರ, N.G.Oಸಂಸ್ಥೆಗಳು,ಪ್ರಖ್ಯಾತ ಪ್ರಾಣಿ ಕಲ್ಯಾಣ ಸಂಸ್ಥೆಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪೂಜ್ಯ ಮಹಾಪೌರರಾದ ಶ್ರೀಮತಿ ಜ್ಯೋತಿ ವಿನಯ ಪಾಟೀಲ ಅವರು ಮಾತನಾಡುತ್ತ ಮೂಕ ಪ್ರಾಣಿಗಳನ್ನು ದತ್ತು ಪಡೆಯಲು ಬಂದ ಸಾರ್ವಜನಿಕರಿಗೆ ಧನ್ಯವಾದಗಳನ್ನು ಹೇಳುತ್ತ ಎಲ್ಲ ಸಾರ್ವಜನಿಕರು ನಾಯಿಗಳ ಹಾಗೂ ದನಗಳ ಬಗ್ಗೆ ಕಾಳಜಿವಹಿಸಬೇಕು,ನಾಯಿಗಳನ್ನು ದತ್ತು ಪಡೆಯುವುದು ಕರ್ನಾಟಕ ದಲ್ಲೇ ಇದೇ ಮೊದಲ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಆಗಮಿಸಿದ ಎಲ್ಲ N.G.O ಸಂಸ್ಥೆಗಳಿಗೆ , ಏಳು ಸರ್ಕಾರೇತರ ಸಂಸ್ಥೆಗಳಿಗೆ, ಹು ದಾ ಮ ಪಾ ಯಲ್ಲಿ ಶ್ವಾನ ಹಿಡಿಯುವವರಿಗೆ ಪಾಲಿಕೆ ವತಿಯಿಂದ ಗೌರವ ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸುಮಾರು 50 ನಾಯಿಗಳನ್ನು ದತ್ತು ಪಡೆದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

