Breaking News

ಸಿಎಂ ಹೇಳಿಕೆ ಆಘಾತಕಾರಿ ವಿಷಯವಾಗಿದೆ : ಫಕೀರ ದಿಂಗಾಲೇಶ್ವರ ಶ್ರೀಗಳ ಅಸಮಾಧಾನ


ಹುಬ್ಬಳ್ಳಿ : ಲಿಂಗೈಕ್ಯ ತೋಂಟದಾರ್ಯ ಸಿದ್ದಲಿಂಗ ಶ್ರೀಗಳ ದಿನವನ್ನು ಭಾವೈಕ್ಯತೆ ದಿನವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದು, ಯಾರದೋ ಮನವಿಗೆ ಬೆಲೆ ಕೊಟ್ಟು ಹೇಳಿಕೆ ನೀಡಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯ ದಿವಸ ಸಿಎಂ ಅವರು ಗದಗನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದು ಆಘಾತಕಾರಿ ವಿಷಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಭಾವೈಕ್ಯತೆಯ ಹೆಸರಾಗಿದ್ದ ಶಿರಹಟ್ಟಿ ಪರಂಪರೆಯನ್ನು ಸಿಎಂ ತಿಳಿದುಕೊಂಡಿಲ್ಲ. ರಾಜ್ಯದಲ್ಲಿ ಯಾವ ಮಠಗಳು ಭಾವೈಕ್ಯತೆಗೆ ಹೆಸರಾಗಿದೆ ಎಂಬುದನ್ನು ಸಿಎಂ ನೆನಪಿಟ್ಟುಕೊಳ್ಳಬೇಕಿದೆ ಎಂದು ನುಡಿದರು.

ಸಿಎಂ ಅವರೇ ನೀವು ಶಿರಹಟ್ಟಿ ಮಠಕ್ಕೆ ನೀವು ಬಹಳ ಸಲ ಬಂದಿದ್ದೀರಿ, ಯಾವುದೋ ಒತ್ತಡಕ್ಕೆ ಮಣಿದು ಈ ನಿರ್ಧಾರ ಘೋಷಿರುವುದು ಸರಿಯಲ್ಲ. ಎರಡು ವರ್ಷದ ಹಿಂದೆ ವೀರಶೈವ, ಲಿಂಗಾಯತ ಸಮುದಾಯ ಎರಡು ಭಾಗ ಎಂದು ಹೇಳುತ್ತಿದ್ದರು, ಆದರೇ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಿದ್ದವರನ್ನು ನೀವು ಹೇಗೆ ಭಾವೈಕ್ಯತೆ ಮೂರ್ತಿ ಅಂತ ಹೇಳುತ್ತಿರಿ. ಅಷ್ಟೇ ಅಲ್ಲದೇ ಒಂದು ಸಮುದಾಯದವರನ್ನು ಇಬ್ಭಾಗ ಮಾಡಿದ್ದವರನ್ನು ಭಾವೈಕ್ಯತೆ ಎಂದು ಹೇಗೆ ಹೇಳುತ್ತಿರಿ ಎಂದು ಪ್ರಶ್ನಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಗೆ ಪತ್ರ ಬರೆಯುವುದಾಗಿ ಹೇಳಿದರು.

Share News

About admin

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *