ಬೆಂಗಳೂರು: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ಈ ಬಾರಿ ಮ್ಯಾಜಿಕ್ ಮಾಡಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೇಂದ್ರ ನಾಯಕರನ್ನು ಕರ್ನಾಟಕದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಬಹುದು ಎಂದು ಬಿಜೆಪಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಅದರಂತೆ ನಿರ್ಮಲಾ, ಜೈಶಂಕರ್ ಅವರಂಥವರಿಗೆ ಸೂಕ್ತ ಸೀಟುಗಳನ್ನು ಹುಡುಕಲಾಗುತ್ತಿದೆ. ನಿರ್ಮಲಾ ಅವರು ಕರ್ನಾಟಕ ಮತ್ತು ಜೈಶಂಕರ್ ಬೆಂಗಳೂರು ದಕ್ಷಿಣದಿಂದ ಪ್ರತಿನಿಧಿಸುವ ಚಿಂತನೆಗಳು ನಡೆಯುತ್ತಿವೆ. ಚುನಾವಣೆ ಸಮಿಪಿಸಿದಂತೆ ರಾಜ್ಯ ಹಾಗೂ ಕೆಂದ್ರ ರಾಜಕಿಯದಲ್ಲಿ ಚುನಾವಣ ತಯಾರಿ ಜೋರು. ಹಾಗೆ ಬಿಜೆಪಿ ಯಲ್ಲು ಗರಿಗೆದರಿದ ತಯಾರಿ.ಸೂಕ್ತ ವ್ಯಕ್ತಿಗೆ ಟಿಕೆಟ ಕೊಡುವ ಬಗ್ಗೆ ಚಿಂತನೆ ನಡಿತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





