Breaking News

ಸ್ನೇಹಿತನ ಜೊತೆ 500 ರೂ. ಬೆಟ್ಸ್ ಕಟ್ಟಿ ನದಿಗೆ ಹಾರಿದ ಯುವಕ ಸಾವು.

ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ನಿವಾಡಾ ಗ್ರಾಮದ 19 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನ ಜೊತೆ 500 ರೂ. ಬೆಟ್ಸ್ ಕಟ್ಟಿ ನೀರಿಗೆ ಹಾರಿದ ನಂತರ ಯಮುನಾ ನದಿಯ ಬಲವಾದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ.ಅಪಾಯವನ್ನು ಲೆಕ್ಕಿಸದೇ ಯುವಕ ಜುನೈದ್ ಎಂಬಾತ ನೀರಿಗೆ ಜಿಗಿದಿದ್ದಾನೆ. ಆತನ ಸ್ನೇಹಿತ ಈ ದೃಶ್ಯವನ್ನ ಸೆರೆ ಹಿಡಿದಿದ್ದಾನೆ.ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗಿದೆ. ನಿರಂತರ ಶೋಧ ಕಾರ್ಯಾಚರಣೆಯ ಹೊರತಾಗಿಯೂ ಜುನೈದ್ ಎಂದು ಗುರುತಿಸಲಾದ ಯುವಕ ಪತ್ತೆಯಾಗಿಲ್ಲ.ಸ್ನೇಹಿತನ ಜೊತೆ ಬೆಟ್ಸ್ ಕಟ್ಟಿ ಸ್ನೇಹಿತನಮ ಸವಾಲನ್ನು ಸ್ವೀಕರಿಸಿ ನದಿಗೆ ಹಾರಿದ ಯುವಕ ಕೆಲಹೊತ್ತು ಈಜಿ ನಂತರ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾನೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *