ಕರಾವಳಿಯಲ್ಲಿ ಮೀನಿನ ಅಭಾವ ಸೃಷ್ಟಿಯಾಗಿದ್ದು,ಕರಾವಳಿಯಲ್ಲಿ ಮೀನು ಬಲು ದುಬಾರಿಯಾದ್ರೆ, ಇನ್ನೊಂದೆಡೆ ಓಮನ್ ದೇಶದ ಬಂಗುಡೆ, ಬೂತಾಯಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಬಾರಿ ನಮ್ಮಲ್ಲಿ ಮೀನಿನ ಉತ್ಪತ್ತಿ ಕಡಿಮೆಯಾಗಿದ್ದು, ಮಾರುಕಟ್ಟೆಗೆ ದೊಡ್ಡ ದೊಡ್ಡ ಗಾತ್ರದ ಓಮನ್ ಮೀನುಗಳು ಲಗ್ಗೆ ಇಟ್ಟಿದೆ.ಓಮನ್ ದೇಶದಿಂದ ಬರುವ ಬೂತಾಯಿ, ಬಂಗುಡೆ ಮೀನುಗಳು ಗುಜರಾತ್‌ನಿಂದ ಸರಬರಾಜು ಆಗುತ್ತಿದೆ.ಈ ಮೀನುಗಳು ಬಣ್ಣ ಹಾಗೂ ಗಾತ್ರದಲ್ಲಿ ಮಂಗಳೂರು ಮೀನಿಗಿಂತ ಭಿನ್ನವಾಗಿದೆ. ಆದರೆ ರುಚಿಯಲ್ಲಿ ವ್ಯತ್ಯಾಸವಿಲ್ಲ.ಬಂಗುಡೆ ಹಾಗೂ ಬೂತಾಯಿ ಮೀನುಗಳು ಮಾರುಕಟ್ಟೆಯಲ್ಲಿದ್ದು ಈ ಮೀನುಗಳು ಮಂಗಳೂರಿನ ಮೀನಿಗಿಂತ ಗಾತ್ರದಲ್ಲಿ ದೊಡ್ಡದಾಗಿದೆ. ಬಹಳಷ್ಟು ರಚಿಕರವಾಗಿರುವ ಓಮನ್ ಮೀನುಗಳಿಗೆ ಹೊಟೇಲ್‌ಗಳಿಗೆ ಬಹಳಷ್ಟು ಬೇಡಿಕೆಯಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

