ಕುಂದಗೋಳ: ಮತಕ್ಷೇತ್ರದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ಪ್ರಸ್ತಾವನೆಯ ಮೇರೆಗೆ ಸಿ.ಎಸ್.ಆರ್ ಯೋಜನೆ ಅಡಿ 1 ಕೋಟಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರೌಢ ಶಾಲೆಗೆ ನೂತನ 7 ಕೊಠಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಇಂದು ಕಾಮಗಾರಿಯನ್ನು ಶಾಸಕ ಎಮ್.ಆರ್.ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತದನಂತರ ಮಾಜಿ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ ಅವರ ಲೋಕೋಪಯೋಗಿ ಇಲಾಖೆಯ 1 ಕೋಟಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಹಿರೇನರ್ತಿಯಿಂದ ಚಾಕಲಬ್ಬಿ ಮಾರ್ಗ ಮಧ್ಯೆ ಇರುವ ಗೂಗಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಕಾಮಗಾರಿಯನ್ನು ಪರಿಶೀಲಿಸಿದರು.ಬಳಿಕ ಕಾಮಗಾರಿ ಗುಣಮಟ್ಟದಿಂದ ಆಗಬೇಕೆಂದು ಮತ್ತು ನಿಗದಿತ ಸಮಯದಲ್ಲಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




