ಚಾಲಕ ಮೊಬೈಲ್ ಫೋನ್ ತೆಗೆದು ರೀಲ್ಸ್, ವಿಡಿಯೋ ಸ್ಕ್ರಾಲ್ ಮಾಡುತ್ತಾ, ಕೆಲ ವಿಡಿಯೋಗಳನ್ನು ಅಸ್ವಾದಿಸುತ್ತಾ ಡ್ರೈವಿಂಗ್ ಮಾಡಿದ್ದಾನೆ. ಹೀಗೆ ಸ್ಕ್ರಾಲ್ ಮಾಡುತ್ತಿರುವಾಗ ಕೆಲ ಅಶ್ಲೀಲ ವಿಡಿಯೋಗಳು ಕಾಣಿಸಿಕೊಂಡಿದೆ.ಡ್ರೈವಿಂಗ್ ನಡುವೆ ಈ ವಿಡಿಯೋಗಳನ್ನು ನೋಡುತ್ತಾ ಸಾಗಿದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಟ್ರಕ್ ನೇರವಾಗಿ ಕಾರಿಗೆ ಡಿಕ್ಕಿಯಾಗಿದೆ. ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಮಾತ್ರವಲ್ಲ, 46 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಇದೀಗ ನ್ಯಾಯಾಲಯ ತೀರ್ಪು ನೀಡಿದೆ. ಆರೋಪಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಘಟನೆ ಇಂಗ್ಲೆಂಡ್‌ನ ಬೂಟಲ್‌ನಲ್ಲಿ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

