ನಗರದ ವಾಯು ಸಂಪರ್ಕದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಿರ್ಮಾಣವಾಗಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವು ಉದ್ಘಾಟನೆಗೆ ಸಜ್ಜಾಗುತ್ತಿದ್ದು, ಅದರ ಸುರಕ್ಷತಾ ವ್ಯವಸ್ಥೆಗೆ ವಿಶ್ವದರ್ಜೆಯ ಬಲ ಬಂದಿದೆ. ಅಂದಾಜು 24 ಕೋಟಿ ರೂಪಾಯಿ ಮೌಲ್ಯದ, ಆಸ್ಟ್ರಿಯಾ ಮೂಲದ ‘ರೋಸೆನ್‌ಬಾವರ್’ ಕಂಪನಿ ನಿರ್ಮಿತ ಎರಡು ಅತ್ಯಾಧುನಿಕ ‘ಪ್ಯಾಂಥರ್’ ಮಾದರಿಯ ಅಗ್ನಿಶಾಮಕ ವಾಹನಗಳು ವಿಮಾನ ನಿಲ್ದಾಣವನ್ನು ತಲುಪಿವೆ.ಇದರ ಮೇಲ್ಭಾಗದಲ್ಲಿರುವ ‘ವಾಟರ್ ಟರ್ರೆಟ್’ (ಫಿರಂಗಿ), ತುರ್ತು ಸಂದರ್ಭಗಳಲ್ಲಿ 160 ಮೀಟರ್ (ಸುಮಾರು 525 ಅಡಿ) ದೂರದವರೆಗೆ ನೀರು ಮತ್ತು ಫೋಮ್ ಅನ್ನು ಚಿಮ್ಮಿಸಿ, ಹೊತ್ತಿ ಉರಿಯುತ್ತಿರುವ ವಿಮಾನದ ಬೆಂಕಿಯನ್ನು ಸುರಕ್ಷಿತ ದೂರದಿಂದಲೇ ನಂದಿಸುವ ಸಾಮರ್ಥ್ಯ ಹೊಂದಿದೆ.ದೈತ್ಯ ವಾಹನಗಳು ಕೆಲವೇ ಸೆಕೆಂಡುಗಳಲ್ಲಿ ಗಂಟೆಗೆ 80 ಕಿ.ಮೀ.ಗೂ ಅಧಿಕ ವೇಗವನ್ನು ತಲುಪಬಲ್ಲವು.
bigtvnews | Hubli Dharwad News | Kannada News | Karnataka News Hubli News | News In Hubli | Local news

