Warning: Undefined array key "wpdb" in /home/eamphica/public_html/wp-content/mu-plugins/lumen-plugin.php on line 5616
ಉಡುಪಿಯಲ್ಲಿ ಮುಂದುವರೆದ ಅಬ್ಬರದ ಮಳೆ – bigtvnews | Hubli Dharwad News | Kannada News | Karnataka News
Breaking News

ಉಡುಪಿಯಲ್ಲಿ ಮುಂದುವರೆದ ಅಬ್ಬರದ ಮಳೆ

ಉಡುಪಿ: ಉಡುಪಿಯಲ್ಲಿ ಮಳೆ ಅಬ್ಬರ ಜೋರಾಗಿದೆ.ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.
ನಿನ್ನೆ ತಡ ರಾತ್ರಿ ಸುರಿದ ಮಳೆಯಿಂದ ಉಡುಪಿ ನಗರದಬನ್ನಂಜೆ, ಮೂಡನಿಡಂಬರೂ, ಕಲ್ಸಂಕಬಗುಂಡಿಬೈಲು ಪ್ರದೇಶಗಳಲ್ಲಿ ನೀರು ತುಂಬಿ ಕೊಂಡಿದೆ.
ನಿಟ್ಟೂರು ಬನ್ನಂಜೆ ,ಹಾಗೂ ಗರೋಡಿ ರಸ್ತೆ ಗಳಲ್ಲಿ ನೀರು ತಿಂಬಿಕೊಂಡಿದ್ದು ಸಂಚಾರ ಸ್ಥಗಿತಗೊಂಡಿದೆ.ಕೆಲವೊಂದು ಮನೆಯೊಳಗಡೆಯೂ ನೀರು ತುಂಬಿಕೊಂಡಿದೆ.
ಇಂದ್ರಾಣಿ ನದಿಗೆ ನಗರ ಸಭೆ ಡ್ರೈನೇಜ್ ಪೈಪ್ ಅಳವಡಿಸಿರುವ ಹಿನ್ನಲೆಯಲ್ಲಿ ಕೃತಕ ನೆರೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಜಿಲ್ಲೆಯ ಕುಂದಾಪುರ ಕಾರ್ಕಳದಲ್ಲೂ ಭಾರೀ ಮಳೆ ಸುರಿದಿದೆ.ಯಡಮೊಗ್ಗೆ ಬಳಿ ಸೇತುವೆ ನಿರ್ಮಾಣ ಹಿನ್ನಲೆಯಲ್ಲಿ ತಾತ್ಕಲಿಕವಾಗಿ ನದಿಗೆ ಹಾಕಲಾಗಿದ ಮಣ್ಣು ಕೊಚ್ಚಿ ಹೋಗಿದ್ದು ಸಂಪರ್ಕ ಕೊಂಡಿ ತಪ್ಪಿ ಹೋಗಿದೆ. ಮುನ್ನೆಚ್ಚೆರಿಕಾ ಕ್ರಮವಾಗಿ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ನೀಡಿದೆ‌ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದ್ದಾರೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *