Breaking News

ಅಕ್ರಮ ಸಂಬಂಧ ಹೊಂದಿದ್ದ ಮಠಪತಿಯ ಸಹೋದರ!!

ಸ್ನೇಹಿತರ ಮಧ್ಯೆ ಹತ್ತು ವರ್ಷ ಅಂತರವಿತ್ತು, ಆದರೂ ಸ್ನೇಹ ಇತ್ತು. ಇವರಿಬ್ಬರ ಜೊತೆ ಇನ್ನೊಬ್ಬ ಸ್ನೇಹಿತ ಸೇರಿ ಒಟ್ಟು ಮೂರು ಜನ ಅಂದು ಊರ ಹೊರಗೆ ಸಾರಾಯಿ ಕುಡಿದಿದ್ದರು. ಅಲ್ಲೂ ಬಸಯ್ಯ ಹಾಗೂ ಲಿಂಗನೂರು ಇಬ್ಬರ ಮಧ್ಯೆ ಗಲಾಟೆಯಾಗಿದೆ. ಇನ್ನೊಬ್ಬ ಸ್ನೇಹಿತ ಗಲಾಟೆ ಬಿಡಿಸಿ ಕಳಿಸಿದ್ದಾನೆ. ನಂತರ ಇಬ್ಬರು ಸೇರಿ ಬಸಯ್ಯ ಮಠಪತಿಯ ಯಾರೂ ವಾಸವಿರದ ಮನೆಗೆ ಬಂದು ಪುನಃ ಗಲಾಟೆ ಮಾಡಿದ್ದಾರೆ. ಆಗ ಟವೆಲ್​ನಿಂದ ಬಿಗಿದು ಬಸಯ್ಯನನ್ನು ಬಸವರಾಜ ಲಿಂಗನೂರು ಕೊಲೆ ಮಾಡಿದ್ದಾನೆ. ಇದಕ್ಕೆ ಕಾರಣ ಪರಿಶೀಲನೆ ವೇಳೆ ಗೊತ್ತಾಗಿದೆ. ಬಸಯ್ಯ ಮಠಪತಿಯ ಸಹೋದರ ಬಸವರಾಜ ಲಿಂಗನೂರು ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕೆ ಕುಡಿತದ ಅಮಲಿನಲ್ಲಿ ಇಬ್ಬರೂ ಜಗಳವಾಡಿಕೊಂಡಿದ್ದರು ಎಂಬುದು ಬಯಲಾಗಿದೆ. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಿದ ಬಸವರಾಜ, ನಂತರ ಬೈಕ್ ತೆಗೆದುಕೊಂಡು ಮಹಾರಾಷ್ಟ್ರ ಕಡೆ ಪರಾರಿಯಾಗಿದ್ದ. ಮಾರ್ಗ ಮಧ್ಯೆ ಕೃಷ್ಣಾ ನದಿಯಲ್ಲಿ ಟವೆಲ್ ಎಸೆದಿದ್ದ. ಮಹಾರಾಷ್ಟ್ರದ ಸೊಲ್ಲಾಪುರದಿಂದ ತಾಯಿಗೆ ಕರೆ ಮಾಡಿದ್ದ. ಆ ಮೂಲಕ ತಾನು ಇರುವ ಜಾಗವನ್ನು ತನಗೆ ಅರಿವಿಲ್ಲದೇ ಪೊಲೀಸರಿಗೆ ಗೊತ್ತಾಗಲು ಕಾರಣನಾಗಿದ್ದಾನೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *