ಸ್ನೇಹಿತರಾದ ಬಸಯ್ಯ ಮಠಪತಿ (34) ಹಾಗೂ ಬಸವರಾಜ ಲಿಂಗನೂರು (24) ಇಬ್ಬರೂ ಸ್ನೇಹಿತರು, ಸೆಪ್ಟೆಂಬರ್ 12 ರಂದು ರಾತ್ರಿ ಎಣ್ಣೆ ಪಾರ್ಟಿ ಮಾಡಿ ಮನೆಗೆ ತೆರಳಿದ್ದರು. ಆದರೆ, ಮಾರ್ಗ ಮಧ್ಯೆ, ಸ್ನೇಹಿತ ಬಸಯ್ಯ ಮಠಪತಿ ಹೆಣವಾಗಿ ಹೋಗಿದ್ದ.
ಮರುದಿನ ಬೆಳಗ್ಗೆ 34 ವರ್ಷದ ಬಸಯ್ಯ ಮಠಪತಿ ದೇಹ ಕತ್ತು ಬಿಗಿದು ಕೊಲೆಯಾದ ಸ್ಥಿತಿಯಲ್ಲಿ ಸಿಕ್ಕಿತ್ತು. ಆದರೆ ಈತನ ಜೊತೆಗೆ ಮದ್ಯ ಸೇವಿಸಿದ್ದ ಬಸವರಾಜ ಲಿಂಗನೂರು ನಾಪತ್ತೆಯಾಗಿದ್ದ. ಬಸವರಾಜ ಲಿಂಗನೂರು ನಾಪತ್ತೆಯಾದ ಕಾರಣ ಆತನ ಮೇಲೆ ಪೊಲೀಸರಿಗೆ ಸಂಶಯವಿತ್ತು.ಸಿಸಿ ಕ್ಯಾಮರಾ ದೃಶ್ಯ ಹಾಗೂ ಅದೊಂದು ಕರೆಯಾಧರಿಸಿ ಬೀಳಗಿ ಪೊಲೀಸರು ಕೊಲೆಗಾರನ ಪತ್ತೆ ಹಚ್ಚಿದ್ದಾರೆ. ಬಸವರಾಜ ಲಿಂಗನೂರನೇ ಕೊಲೆ ಆರೋಪಿಯಾಗಿದ್ದು, ಬಂಧನಕ್ಕೊಳಗಾಗಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

