Breaking News

ಪ್ರಧಾನಿ ಮೋದಿಗೆ ರಾಖಿ ಕಟ್ಟಲು ಪಾಕ್‌ನಿಂದ ಬರ್ತಾರೆ ಸಹೋದರಿ!

ನವದೆಹಲಿ: ರಕ್ಷಾ ಬಂಧನ ಹಬ್ಬದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಲು ಪಾಕಿಸ್ತಾನದಿಂದ ಮಹಿಳೆಯೊಬ್ಬರು ದೆಹಲಿಗೆ ಆಗಮಿಸುತ್ತಿದ್ದಾರೆ. ಭಾರತ ಮೂಲದ ಮೋದಿ ಪಾಕಿಸ್ತಾನಿ ಸಹೋದರಿ ಕಮರ್ ಮೊಹ್ಸಿನ್ ಶೇಖ್ ರಾಖಿ ಹಬ್ಬ ಆಚರಿಸಲು ದೆಹಲಿಗೆ ಆಗಮಿಸಲಿದ್ದಾರೆ.

ಪ್ರತಿವರ್ಷ ಪ್ರಧಾನಿ ಮೋದಿ ಅವರಿಗೆ ರಾಖಿ ಕಳುಹಿಸುತ್ತಿದ್ದರಂತೆ. ಆದರೆ ಕೋವಿಡ್ ಇದ್ದ ಕಾರಣ ಕಳೆದ 2 ವರ್ಷಗಳಿಂದ ಅವರು ಭಾರತಕ್ಕೆ ಆಗಮಿಸಿರಲಿಲ್ಲ. ಹೀಗಾಗಿ ಈ ಬಾರಿ ದೆಹಲಿಗೆ ಆಗಮಿಸಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಮೋದಿ ಗುಜರಾತ್ ಸಿಎಂ ಆಗಿದ್ದಾಗಿನಿಂದಲೂ ಅವರು ರಾಖಿ ಕಳುಹಿಸುತ್ತಿದ್ದರಂತೆ. ಅವರ ವಿವಾಹದ ಬಳಿಕ ಪಾಕಿಸ್ತಾನಕ್ಕೆ ತೆರಳಿ ನೆಲೆಸಿದ್ದರು. ಪಾಕ್‌ನಲ್ಲಿದ್ದಾಗಲೂ ಪ್ರಧಾನಿಗೆ ರಾಖಿ ಕಳುಹಿಸುತ್ತಿದ್ದರು. ಈ ಕುರಿತು ಮಾತನಾಡಿದ ಅವರು, ‘ನಾನು ಅವರಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ಕೋರುತ್ತೇನೆ. ಅವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ಪ್ರತಿದಿನ ಪ್ರಾರ್ಥಿಸುತ್ತೇನೆ. ನಾನು ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಬೇಕೆಂದು ಪ್ರಾರ್ಥಿಸಿದಾಗ ಅವರು ಸಿಎಂ ಆಗಿದ್ದರು. ಬಳಿಕ ಪ್ರಧಾನಿಯಾಗಲಿ ಅಂತಲೂ ಪ್ರಾರ್ಥನೆ ಮಾಡುತ್ತಿದ್ದೆ’ ಎಂದಿದ್ದಾರೆ.

‘ರಾಖಿ ಕಟ್ಟಿದಾಗಲೆಲ್ಲ ಅವರು ಪ್ರಧಾನಿಯಾಗಬೇಕೆಂಬ ನನ್ನ ಆಸೆಯನ್ನು ವ್ಯಕ್ತಪಡಿಸುತ್ತಿದ್ದೆ. ಅವರ ಪ್ರತಿಕ್ರಿಯೆ ಯಾವಾಗಲೂ ಸಕಾರಾತ್ಮಕವಾಗಿತ್ತು, ನಿಮ್ಮ ಎಲ್ಲಾ ಆಸೆಗಳನ್ನು ದೇವರು ಪೂರೈಸುತ್ತಾನೆ ಎನ್ನುತ್ತಿದ್ದರು. ಈಗ ಅವರು ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಎಂದು ಶೇಖ್ ಸಂತಸ ಹಂಚಿಕೊಂಡಿದ್ದಾರೆ.

ಈ ಬಾರಿ ಅವರಿಗಾಗಿ ನಾನು ವಿಶೇಷ ರಾಖಿ ಸಿದ್ಧಪಡಿಸಿದ್ದೇನೆ. ಕೆಂಪು ಬಣ್ಣದ ರಾಖಿ ಅವರಿಗಾಗಿ ತಯಾರು ಮಾಡಿದ್ದೇನೆ. ಕೋವಿಡ್‌ನಲ್ಲಿ ಅವರಿಗಾಗಿ ರಾಖಿಯನ್ನು ಪೋಸ್ಟ್ ಮಾಡಿದ್ದೆ ಈಬಾರಿ ದೆಹಲಿಗೆ ತೆರಳಲಿದ್ದೇನೆ ಎಂದಿದ್ದಾರೆ

Share News

About BigTv News

Check Also

ಸಂಪುಟ ಪುನಾರಚನೆ: ಸಲೀಮ್ ಮಹಮದ್ ಹೇಳಿಕೆ….

ಮಗುವಿನ ಮನಸ್ಸಿನ, ಸಬ್ಯ ನಾಯಕ ಸಲೀಂ ಅಹ್ಮದ್ ಗೆ ಸಚಿವ ಸ್ಥಾನ ಪಕ್ಕಾ!!! ಉ-ಕ ಅಲ್ಪಸಂಖ್ಯಾತ ನಾಯಕರ ಕೋಟಾದಡಿ ಸಚಿವ …

Leave a Reply

Your email address will not be published. Required fields are marked *