ರೋಡ್ ಮೇಲೆ ಬೈಕ್ ಸವಾರಿ ಮಾಡುವಾಗ ಮೈ ತುಂಬಾ ಕಣ್ಣು ಇರಬೇಕು ಅಂತಾರೆ ವೃತ್ತಿಪರ ಚಾಲಕರು. ಯಾಕಂದ್ರೆ ಅಕಸ್ಮಾತ್ ಒಂದು ಚೂರು ಏನಾದ್ರೂ ಎಡವಟ್ಟು ಮಾಡಿಕೊಂಡ್ರೆ ಜೀವ ಹೋಗೋದು ಗ್ಯಾರಂಟಿ. ಅದರಲ್ಲೂ ನಾಯಿ, ಎಮ್ಮೆ, ಹಸು ಅಡ್ಡ ಬಂದ್ರೆ ಬೈಕ್ ಸವಾರರ ಕಥೆ ಮುಗಿದೇ ಹೋಯ್ತು ಅನ್ನಬೇಕು. ಇಲ್ಲೂ ಅಷ್ಟೇ ತನ್ನಪಾಡಿಗೆ ಬುಲೆಟ್‌ನ ಹತ್ತಿ, ಬೈಕ್ ಸವಾರಿ ಹೊರಟಿದ್ದ ಸವಾರನಿಗೆ ಕೋಣ ಒಂದು ಬಂದು ಗುದ್ದೇ ಬಿಟ್ಟಿದೆ!
ಬೆಂಗಳೂರು ನಗರದಂಥ ದೊಡ್ಡ ದೊಡ್ಡ ಸಿಟಿಯಲ್ಲಿ ಬೈಕ್ ಸವಾರರಿಗೆ ನಾಯಿಗಳ ಕಾಟ ಇದ್ರೆ, ಸಣ್ಣ ಪುಟ್ಟ ಹಳ್ಳಿಗಳಲ್ಲಿ ಹಸು & ಎಮ್ಮೆ ಅಥವಾ ಕೋಣಗಳ ಕಾಟ ಹೆಚ್ಚಿರುತ್ತದೆ. ಹೀಗಿದ್ದಾಗ ತುಂಬಾ ಹುಷಾರಾಗಿ ಬೈಕ್ ಓಡಿಸಬೇಕು. ಹೀಗಿದ್ದಾಗಲೇ ಬೈಕ್ ಸವಾರನೊಬ್ಬ ಎಚ್ಚರಿಕೆಯಿಂದ ಬುಲೆಟ್ ಬೈಕ್ ಚಾಲನೆ ಮಾಡದ ಪರಿಣಾಮ, ಕೋಣಕ್ಕೆ ಗುದ್ದಿ ಕೆಳಗಡೆ ಬಿದ್ದಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





