Breaking News

ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ಮಾರಾಟ ಮಾಡ್ತಿದ್ದ ಗ್ಯಾಂಗ್ ಅಂದರ್!

ಹೊಸಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಕಲಿ ಚಿನ್ನವನ್ನೇ ಅಸಲಿ ಚಿನ್ನವೆಂದು ಮಾರಾಟ ಮಾಡ್ತಿದ್ದ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ರಾಜೇಶ್‌ ಹಾಗೂ ಆತನ ಮೂವರು ಸಂಗಡಿಗರು ಸೇರಿ ನಾಲ್ವರು ಬಂಧಿತ ಆರೋಪಿಗಳಾಗಿದ್ದು, ಈ ಖತರ್ನಾಕ್ ಗ್ಯಾಂಗ್ ಈ ಹಿಂದೆ ಹೊಸಕೋಟೆ, ನಂದಗುಡಿ, ಶಿಡ್ಲಘಟ್ಟದಲ್ಲಿ ಎಂಟು ಮಂದಿಗೆ 65 ಲಕ್ಷ ವಂಚನೆ ಮಾಡಿತ್ತು ಎಂದು ವಿಚಾರಣೆಯ ವೇಳೆ ಬಯಲಾಗಿದೆ.ಗ್ಯಾಂಗ್‌ ನಕಲಿ ಚಿನ್ನದ ಸರವನ್ನು ಅಸಲಿ ಚಿನ್ನದ ಸರ ಅಂತ ಕೊಟ್ಟು ಎಸ್ಕೇಪ್ ಆಗುತ್ತಿದ್ದರೆಂದು ತಿಳಿದುಬಂದಿದೆ. ಮನೆಗೆ ಹೋಗಿ ಚಿನ್ನವನ್ನು ಪರಿಶೀಲಿಸಿದ್ದ ವ್ಯಕ್ತಿಗಳಿಗೆ ತಾವು ಮೋಸ ಹೋದ ವಿಷಯ ಗೊತ್ತಾಗಿ ಹೊಸಕೋಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *