Breaking News

ಕೋಲಾರ | ಟ್ರಕ್‌ ಡಿಕ್ಕಿ ಹೊಡೆದ ರಭಸಕ್ಕೆ ಹೆದ್ದಾರಿಯಲ್ಲಿ ಕುಸಿದ ಸ್ಕೈವಾಕ್.

ಬೆಂಗಳೂರಿನಿಂದ ಅಕ್ಕಿಚೀಲ ತುಂಬಿಕೊಂಡು ಬರುತ್ತಿದ್ದ ಟ್ರಕ್, ಕೊಂಡರಾಜನಹಳ್ಳಿ ಆಂಜನೇಯ ದೇಗುಲ ಬಳಿ ರಾತ್ರಿ 11 ಗಂಟೆ ಸುಮಾರಿಗೆ ಡಿಕ್ಕಿ ಹೊಡೆದಿದ್ದು, ಆ ರಭಸಕ್ಕೆ ಸ್ಕೈವಾಕ್ ಮಧ್ಯಕ್ಕೆ ತುಂಡಾಗಿದೆ.

ಸ್ಕೈವಾಕ್‍ನ ಅರ್ಧ ಭಾಗ ಲಾರಿಯ ಮೇಲೆ ಬಿದ್ದಿದ್ದು, ಮತ್ತೊಂದು ಭಾಗವು ಪಕ್ಕದ ರಸ್ತೆಯಲ್ಲಿ ಬಿದ್ದಿದೆ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಎರಡು ಲಾರಿ ಹಾಗೂ ಒಂದು ಕಾರು ಜಖಂಗೊಂಡಿವೆ. ಅದೃಷ್ಟವಶಾತ್‌ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ. ಗಾಬರಿಗೊಂಡ ಸ್ಥಳೀಯರು ಟ್ರಕ್‌ನಿಂದ ಚಾಲಕನನ್ನು ಕೆಳಗಿಳಿಸಿ ‌ಥಳಿಸಲು‌ ಮುಂದಾದರು. ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದಾಗ ವಾಹನವು ನಿಯಂತ್ರಣ ತಪ್ಪಿ ಸ್ಕೈವಾಕ್‌ಗೆ ಗುದ್ದಿತು ಎಂದು ಚಾಲಕನು ಹಿಂದಿಯಲ್ಲಿ ಹೇಳುತ್ತಿದ್ದದ್ದು ಕಂಡುಬಂತು. ಬಳಿಕ ಸ್ಥಳೀಯರು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *