Breaking News

ಸುಸೂತ್ರವಾಗಿ ಸಾಗಿದ ಮೊದಲ ದಿನಮೇಕೆದಾಟು ಪಾದಯಾತ್ರೆ

ಸಂಗಮ (ರಾಮನಗರ): ಹಲವು ಅಡ್ಡಿ ಆತಂಕಗಳನ್ನೂ ಮೀರಿ ಭಾನುವಾರ ಮೇಕೆದಾಟು ಪಾದಯಾತ್ರೆಯು ಮೊದಲ ದಿನ ಸುಸೂತ್ರವಾಗಿ ನಡೆದಿದ್ದು, ಕಾಂಗ್ರೆಸ್ ಪಾಳೆಯದ ಉತ್ಸಾಹ ಇಮ್ಮಡಿಗೊಂಡಿದೆ.

ಬೆಳಿಗ್ಗೆ 11.30ಕ್ಕೆ ವೇದಿಕೆ ಕಾರ್ಯಕ್ರಮ ಮುಕ್ತಾಯದ ಬಳಿಕ ಪಾದಯಾತ್ರೆ ಆರಂಭಗೊಂಡಿದ್ದು, ಕಾಂಗ್ರೆಸ್ ನಾಯಕರು ಉತ್ಸಾಹದಿಂದಲೇ ಹೆಜ್ಜೆ ಹಾಕಿದರು. ಆದರೆ ನಂತರದಲ್ಲಿ ಏರುಮುಖವಾದ ಹಾದಿ, ನೆತ್ತಿ ಸುಡುವ ಬಿಸಿಲಿನ ಕಾರಣಕ್ಕೆ ಪಾದಯಾತ್ರಿಕರು ಬಳಲಿದ್ದು ಕಂಡುಬಂದಿತು.

ಅಲ್ಲಲ್ಲಿ ಪಾನೀಯ, ನೀರು ಕುಡಿಯುತ್ತಲೇ ‘ನೀರಿಗಾಗಿ ನಡಿಗೆ’ ಮುಂದುವರಿಯಿತು. ಡಿ.ಕೆ. ಶಿವಕುಮಾರ್ ಜೊತೆಗೆ ಆರ್‌.ವಿ. ದೇಶಪಾಂಡೆ, ಎಚ್‌.ಕೆ. ಪಾಟೀಲ, ಎಂ.ಬಿ. ಪಾಟೀಲ, ಜಿ. ಪರಮೇಶ್ವರ, ಡಿ.ಕೆ. ಸುರೇಶ್‌, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಹಲವು ನಾಯಕರು ಒಂದಿಷ್ಟು ದೂರ ನಡೆದರು.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *