ಮಹಿಳಾ ಶಿಕ್ಷಕಿ ಪೊಲೀಸರ ಮುಂದೆ ಆಘಾತಕಾರಿ ಹೇಳಿಕೆ ನೀಡಿದ್ದು, ಆ ವಿದ್ಯಾರ್ಥಿಯಿಂದ ತಾನು ಗರ್ಭಿಣಿಯಾಗಿದ್ದು ಈಗ ಐದು ತಿಂಗಳು ಎಂದು ಹೇಳಿದ್ದಾಳೆ.ಪೊಲೀಸ್ ದಾಖಲೆಗಳ ಪ್ರಕಾರ, ಈ ಘಟನೆ ಸೂರತ್‌ನ ತರಬೇತಿ ಕೇಂದ್ರಕ್ಕೆ ಸಂಬಂಧಿಸಿದೆ. ಅಲ್ಲಿ ಮಹಿಳಾ ಶಿಕ್ಷಕಿ 5ನೇ ತರಗತಿ ವಿದ್ಯಾರ್ಥಿಗೆ ಪಾಠ ಮಾಡುತ್ತಿದ್ದರು. ಕ್ರಮೇಣ, ಇಬ್ಬರ ನಡುವಿನ ಆತ್ಮೀಯತೆ ಬೆಳೆದು ಕೊನೆಗೆ ಅವರು ದೈಹಿಕ ಸಂಬಂಧವನ್ನು ಹೊಂದಿದ್ದರು. ಏಪ್ರಿಲ್ 24ರಂದು ಇಬ್ಬರೂ ಮನೆಯಿಂದ ಓಡಿಹೋಗಿದ್ದರು. ನಂತರ ಕುಟುಂಬವು ಪೊಲೀಸರಿಗೆ ದೂರು ನೀಡಿತು. ನಾಲ್ಕು ದಿನಗಳ ನಂತರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿತ್ತು. ಪೊಲೀಸರ ವಿಚಾರಣೆ ವೇಳೆ, ಶಿಕ್ಷಕಿ ತಾನು ಐದು ತಿಂಗಳ ಗರ್ಭಿಣಿ ಎಂದು ಹೇಳಿದ್ದಾಳೆ. ತಾನು ಗರ್ಭ ಧರಿಸಲು 13 ವರ್ಷದ ವಿದ್ಯಾರ್ಥಿ ಕಾರಣನಾಗಿದ್ದಾನೆ. ಹೀಗಾಗಿ ಬಾಲಕನೊಂದಿಗೆ ಓಡಿಹೋಗಿ ಬೇರೆ ನಗರದಲ್ಲಿ ನೆಲೆಸಲು ಬಯಸುತ್ತಿರುವುದಾಗಿಯೂ ಹೇಳಿದ್ದಾಳೆ. ಏತನ್ಮಧ್ಯೆ, ವಿದ್ಯಾರ್ಥಿಯು ಶಿಕ್ಷಕಿಯೊಂದಿಗೆ ಹಲವಾರು ಬಾರಿ ದೈಹಿಕ ಸಂಬಂಧ ಹೊಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

