Breaking News

ಕಾಲೇಜ್ ಹುಡುಗಿಯರನ್ನಿಟ್ಟುಕೊಂಡು ದಂಧೆ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ!

ಅಪ್ರಾಪ್ತ ಕಾಲೇಜ್ ಹುಡುಗಿಯರನ್ನಿಟ್ಟುಕೊಂಡು ದಂಧೆ ಮಾಡುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಮೂಡಬಿದಿರೆ ಪೊಲೀಸರು ದಾಳಿ ಮಾಡಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಟೋ ಚಾಲಕ ಮಹೇಶ್, ಕಟೀಲು ನಿವಾಸಿ ಶ್ರೀಕಾಂತ್, ಯಜ್ಞೇಶ್ ಮತ್ತು ದಿಲೀಪ್ ಬಂಧಿತರು.ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ನಿಡ್ಡೋಡಿ ಎಂಬಲ್ಲಿ ಘಟನೆ ನಡೆದಿದೆ. ಮೂಡಬಿದಿರೆಯ ನಿಡ್ಡೋಡಿ ನಿವಾಸಿ ಆಟೋ ಚಾಲಕ, ಬಂಧಿತ ಮಹೇಶ್, ಇಬ್ಬರು ಅಪ್ರಾಪ್ತ ಕಾಲೇಜ್​ ಬಾಲಕಿಯರನ್ನು ಪುಸಲಾಯಿಸಿ ಕರೆತಂದಿದ್ದ.

ಇದೇ ವೇಳೆ ತನ್ನ ಸ್ನೇಹಿತರನ್ನು ಮನೆಗೆ ಕರೆಸಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಮೂಡಬಿದಿರೆ ಪೊಲೀಸರು ಇಬ್ಬರು ಅಪ್ರಾಪ್ತೆಯರ ರಕ್ಷಣೆ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *