Breaking News

ಮಹಿಳೆಯ ಬೆರಳು ಕತ್ತರಿಸಿ ಚಿನ್ನದ ಸರ ಎಗರಿಸಿದ್ದ ಆರೋಪಿಗಳು ಅಂದರ್.

ಬೈಕ್ನಲ್ಲಿ ಬಂದು ಮಹಿಳೆ ಕತ್ತಿಗೆ ಕೈ ಹಾಕಿ ಸರ ಎಗರಿಸಿದ್ದರು. ಈ ವೇಳೆ ಆರೋಪಿ ಯೋಗಾನಂದ ಮಹಿಳೆಯರನ್ನು ರಸ್ತೆಯಲ್ಲೇ ಅಟ್ಟಾಡಿಸಿದ್ದ.ಈ ಕೃತ್ಯ ಇಡೀ ಬೆಂಗಳೂರು ಬೆಚ್ಚಿ ಬಿಳುವಂತೆ ಮಾಡಿತ್ತು. ಸೆಪ್ಟಂಬರ್ 13 ರಾತ್ರಿ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಿ ನಗರದಲ್ಲಿ ಈ ಘಟನೆ ನಡೆದಿತ್ತು.ಆರೋಪಿಗಳ ಬೆನ್ನುಬಿದ್ದ ಪೊಲೀಸರು,ಒಂದು ತಿಂಗಳಿಂದ ಊರಿನಲ್ಲೇ ಕಾದು ಕುಳಿತು ಖೆಡ್ಡಾಗೆ ಕೆಡವಿದ್ದಾರೆ. ಈ ವೇಳೆ ಆರೋಪಿಗಳು ಗೋವಾ-ಮುಂಬೈ ಸುತ್ತಿ ಸುತ್ತಿ ಇದ್ದ ಹಣವನ್ನೆಲ್ಲಾ ಖರ್ಚು ಮಾಡಿದ್ದರು. ಹಣ ಖಾಲಿಯಾದ ಮೇಲೆ ವಾಪಸ್ ಊರಿಗೆ ಬಂದಿದ್ದರು.ಈ ವೇಳೆ ಬಲೆ ಬೀಸಿ ಆರೋಪಿಗಳನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 74 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಲಾಂಗ್ ವಶಕ್ಕೆ ಪಡೆಯಲಾಗಿದೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *