Breaking News

ಡಿವೋರ್ಸ್‌ ಕೊಟ್ಟಿದ್ದಕ್ಕೆ ಪತ್ನಿಯನ್ನೇ ಹತ್ಯೆಗೈದ ಪೊಲೀಸ್‌!

ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಪೊಲೀಸ್‌ ಸಿಬ್ಬಂದಿಯೊಬ್ಬರು ಹತ್ಯೆಗೈದಿರುವ ಘಟನೆ ಬೆಳಗಾವಿಯ ಸವದತ್ತಿಯಿಲ್ಲಿ ನಡೆದಿದೆ. ಬಸ್‌ ಕಂಡಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಕಾಶಮ್ಮ ನೆಲ್ಲಿಕಟ್ಟಿ ಮೃತ ದುರ್ದೈವಿ. ಗಂಡ ಸಂತೋಷ್‌ ಕಾಂಬಳೆ ಕೊಲೆ ಆರೋಪಿಯಾಗಿದ್ದಾನೆ.ಹೆಂಡತಿಗೆ ಪ್ರತಿದಿನವೂ ಕರೆ ಮಾಡಿ ಅಶ್ಲೀಲವಾಗಿ ನಿಂದಿಸುತ್ತಿದ್ದ ಸಂತೋಷ ಅ . 13ರಂದು ಸಂಜೆ ಕಾಶಮ್ಮನ ಮನೆಯ ಬಳಿ ಹೋಗಿ ಗಲಾಟೆ ಮಾಡಿದ್ದ. ಇದೇ ವೇಳೆ ಪತ್ನಿಯ ಕತ್ತು ಕೊಯ್ದು ಹೊಟ್ಟೆಗೆ ಇರಿದು ಮೂರು ಬಾರಿ ಕೊಚ್ಚಿ ಕೊಲೆ ಮಾಡಿ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದ. ಮೂರು ದಿನದ ಬಳಿಕ ದುರ್ವಾಸನೆ ಬಂದು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಕೊಲೆ ಕೇಸ್ ದಾಖಲಿಸಿಕೊಂಡಿರುವ ಸವದತ್ತಿ ಪೊಲೀಸರು ಪರಾರಿಯಾದ ಆರೋಪಿ ಸಂತೋಷ ಗಾಗಿ ಹುಡುಕಾಟ ನಡೆಸಿದ್ದಾರೆ.

Share News

About Shaikh BigTv

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *