ಕೊಡಗಿಗೆ ಪ್ರವಾಸಿಗರಿಗಿಂತ ಹೆಚ್ಚು ಸಮಸ್ಯೆಯಾಗಿರುವುದ ಅವರು ನಿಸರ್ಗದ ಮಡಿಲಲ್ಲಿ ಎಸೆದು ಹೋಗುತ್ತಿರುವ ಕಸ. ಇದು ಬರೀಯ ಕೊಡಗಿನ ಸಮಸ್ಯೆಯಲ್ಲ ಬಹುತೇಕ ಎಲ್ಲಾ ಪ್ರವಾಸಿ ತಾಣಗಳ ಕತೆಯೂ ಇದೇ ಆಗಿದೆ. ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಕೊಡಗಿನ ಮಡಿಲಲ್ಲಿ ಪರಿಸರದಲ್ಲಿ ಕರಗದ ಕಸವನ್ನು ಎಸೆದು ಪರಿಸರ ಹಾಳು ಮಾಡಿ ಹೋಗುತ್ತಿದ್ದಾರೆ. ಇದರ ವಿರುದ್ಧ ಈ ಹಿಂದೆಯೂ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊಡಗಿನ ಕೆಲ ಸಂಘಟನೆಗಳು ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದರು. ಕೆಲ ದಿನಗಳ ಹಿಂದೆ ಇಲ್ಲಿ ಪ್ರವಾಸಿಗರು ಕಾರಿನಿಂದ ಎಸೆದ ಕಸವನ್ನು ಅವರನ್ನೇ ಹಿಂಬಾಲಿಸಿ ಹೋಗಿ ಮತ್ತೆ ಎತ್ತಿಸಿದಂತಹ ಘಟನೆ ನಡೆದಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

