Breaking News

ಪೊಲೀಸರ ಗುಂಡಿಗೆ ಬಲಿಯಾದ ಕುಖ್ಯಾತ ರೌಡಿ!

ದರೋಡೆ ಮಾಡಿ ಪರಾರಿಯಾಗಿದ್ದ ಕುಖ್ಯಾತ ರೌಡಿಯನ್ನು ಬಂಧಿಸಲು ತೆರಳಿದ್ದ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದಾಗ ಆತರಕ್ಷಣೆಗಾಗಿ ಇನ್ಸ್ ಪೆಕ್ಟರ್‌ ಹಾರಿಸಿದ ಗುಂಡು ತಗುಲಿ ರೌಡಿ ಮೃತಪಟ್ಟಿ ರುವ ಘಟನೆ ಇಂದು ಬೆಳಿಗ್ಗೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಬಳಿ ನಡೆದಿದೆ.ಯುನೀಶ್‌ ಅಕ್ಲಾಸ್‌‍ ಪಟೇಲ್‌ (35) ಪೊಲೀಸರ ಗುಂಡಿಗೆ ಬಲಿ ಯಾದ ಕುಖ್ಯಾತ ರೌಡಿ.ಈತ ಗಾಂಧಿ ಚೌಕ್‌ ಪೊಲೀಸ್‌‍ ಠಾಣೆಯ ರೌಡಿ ಶೀಟರ್‌. ವಿಜಯಪುರದಲ್ಲಿ ವಾಸವಾಗಿದ್ದ ಈತ ಇತ್ತೀಚೆಗೆ ಆಲಮೇಲ ತಾಲೂಕಿನ ದೇವಣಗಾಂವ್‌ ಗ್ರಾಮಕ್ಕೆ ಬಂದು ವಾಸವಾಗಿದ್ದನು. ನಗರದ ಗಾಂಧಿ ಚೌಕ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಚಾಕು ತೋರಿಸಿ ವ್ಯಕ್ತಿಯೊಬ್ಬರಿಂದ 25 ಸಾವಿರ ಹಣ ದರೋಡೆ ಮಾಡಿ ನಂತರ ಅವರ ಸ್ಕೂಟಿಯನ್ನು ಕಿತ್ತುಕೊಂಡು ರೌಡಿ ಯುನೀಶ್‌ ಪರಾರಿಯಾಗಿದ್ದನು.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *