ರೈಲ್ವೆ ಹಳಿ ಪಕ್ಕ ನಿಂತು ರೀಲ್ಸ್ ಮಾಡುತ್ತಿದ್ದ ಬಾಲಕನಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪುರಿಯಲ್ಲಿ ನಡೆದಿದೆ. ಮಂಗಳಘಾಟ್ ನಿವಾಸಿಯಾದ ಬಾಲಕ ತನ್ನ ತಾಯಿಯೊಂದಿಗೆ ಇಂದು ಮುಂಜಾನೆ ದಕ್ಷಿಣಕಾಳಿ ದೇವಸ್ಥಾನಕ್ಕೆ ಹೋಗಿದ್ದನು.ಅವರು ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತನ್ನ ಮೊಬೈಲ್ ಫೋನ್‌ನಲ್ಲಿ ರೀಲ್ಸ್ ರೆಕಾರ್ಡ್ ಮಾಡಲು ರೈಲ್ವೆ ಹಳಿ ಪಕ್ಕ ನಿಂತಿದ್ದಾಗ ಈ ಘಟನೆ ನಡೆದಿದೆ. ಡಿಕ್ಕಿಯ ರಭಸ ಎಷ್ಟು ತೀವ್ರವಾಗಿತ್ತೆಂದರೆ ಆತ ಅಲ್ಲೇ ಸಾವನ್ನಪ್ಪಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

