ತಿರುವಾರೂರು ಜಿಲ್ಲೆಯ ಮರುದಪ್ಪತ್ತಿನಂ ಭಾಗಕ್ಕೆ ಸೇರಿದ ಪ್ರವೀಣ್ ಕುಮಾರ್ (ವಯಸ್ಸು 21) ಕಾಲೇಜು ವ್ಯಾಸಂಗ ಮುಗಿಸಿ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಪ್ರವೀಣ್ ಗೆ ಇನ್ಸ್ಟಾಗ್ರಾಮ್ ನಲ್ಲಿ ಕುಂಭಕೋಣಂ ಮೂಲದ ಜಯಶ್ರೀ (ವಯಸು 19) ಎಂಬ ಯುವತಿಯ ಪರಿಚಯವಾಗಿತ್ತು. ಬಳಿಕ ಈ ಪರಿಚಯ ಪ್ರೇಮಕ್ಕೆ ತಿರುಗಿತ್ತು.ಪ್ರವೀಣ್ ನಡೆಗೆ ಆಘಾತ ವ್ಯಕ್ತಪಡಿಸಿದ ಯುವತಿ ಜಯಶ್ರೀ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕೊಳಕ್ಕೆ ಧುಮುಕಿದ ಸ್ಥಳೀಯರು ಪ್ರವೀಣ್ ನನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರವೀಣ್ ಸಿಗಲಿಲ್ಲ. ಹೀಗಾಗಿ ಗ್ರಾಮಸ್ಥರು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿ ಪ್ರವೀಣ್ ದೇಹವನ್ನು ಹೊರ ತೆಗೆದಿದ್ದಾರೆ.ಕೂಡಲೇ ಪ್ರವೀಣ್ ನನ್ನು ತಿರುವರೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆದರೆ ಪ್ರವೀಣ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

