Breaking News

ರಾಯಚೂರು: ಲಿಂಗಸುಗೂರಿನಲ್ಲಿ ಕ್ಷುಲ್ಲಕ ಜಗಳಕ್ಕೆ ಯುವಕನ ಕೊಲೆ

ಲಿಂಗಸುಗೂರು: ತಾಲ್ಲೂಕಿನ ಭೂಪೂರು (ರಾಂಪುರ) ಗ್ರಾಮದಲ್ಲಿ ಕ್ಷುಲ್ಲಕ ಜಗಳದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಗ್ರಾಮದ ಶಿವನಗೌಡ ಅಮರೇಗೌಡ ಗೌಡ್ರ (30) ಮೃತ ಯುವಕ. ಭೂಪೂರು ತಾಂಡಾಕ್ಕೆ ಬರಬೇಡ ಎಂಬ ವಿಚಾರಕ್ಕೆ ಲಕ್ಕಪ್ಪ, ಶಂಕ್ರಪ್ಪ, ಅನಿಲ್ ಹಾಗೂ ವೆಂಕಟೇಶ ಸೇರಿಕೊಂಡು ಶಿವನಗೌಡನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಶಿವನಗೌಡ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

₹50 ಲಕ್ಷ ಲಂಚ ಸ್ವೀಕರಿಸುವಾಗ ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

ಧಾರವಾಡದಲ್ಲಿ ₹50 ಲಕ್ಷ ಲಂಚದ ಬೇಟೆ..! 1 ಎಕರೆ ಜಮೀನಿಗೂ ಬೇಡಿಕೆ — ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾ ಬಲೆಗೆ..! …

Leave a Reply

Your email address will not be published. Required fields are marked *