ವಿಜಯನಗರ: ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿ, ಬಲವಂತವಾಗಿ ತಾಳಿ ಕಟ್ಟಿ ಕಿರುಕುಳ ನೀಡಿದ ಪ್ರಕರಣದಲ್ಲಿ ಕೂಡ್ಲಿಗಿ ತಾಲ್ಲೂಕಿನ ವಿರುಪಾಪುರದ ಮಾರೇಶ ಎಂಬಾತನಿಗೆ ನ್ಯಾಯಾಲಯ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1.75 ಲಕ್ಷ ದಂಡ ವಿಧಿಸಿದೆ. 2019ರ ಮೇ 26ರಂದು ಬಾಲಕಿಯನ್ನು ಅಪಹರಿಸಿದ್ದ ಮಾರೇಶ, ಸಂಡೂರು ಹಾಗೂ ಗಾಣಗಟ್ಟೆ ದೇವಸ್ಥಾನಗಳಲ್ಲಿ ಇರಿಸಿ ಬಲವಂತವಾಗಿ ಮದುವೆಯಾಗಿದ್ದ. ಬಳಿಕ ದೈಹಿಕ ಕಿರುಕುಳ ನೀಡಿದ್ದ ಎಂದು ಪ್ರಕರಣ ದಾಖಲಾಗಿತ್ತು. ಕೂಡ್ಲಿಗಿ ಠಾಣೆಯಲ್ಲಿ ಪೋಕ್ಸೊ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ಶಿಕ್ಷೆ ಪ್ರಕಟಿಸಿದ್ದು, ದಂಡದ ₹1 ಲಕ್ಷವನ್ನು ಬಾಲಕಿಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
