Breaking News

ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ತಮ್ಮನಿಂದಲೇ ಕೊಲೆ: ವಿಲವಿಲ ಅಂತಾ ಒದ್ದಾಡಿದ ಯುವತಿ.! CCTVಯಲ್ಲಿ ಸೆರೆ

ಯುವತಿಯೊಬ್ಬಳನ್ನು ರಸ್ತೆಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಭೀಕರ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಜುಲೈ 13ರಂದು ನಡೆದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಮೃತಾ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 15ರಂದು ಮೃತಪಟ್ಟಿದ್ದಾರೆ. ಅಮೃತಾ ಹಾಗೂ ಧನುಷ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಧನುಷ್‌ನ ಹಿಂದಿನ ಮದುವೆ ಹಾಗೂ ಮಗುವಿನ ವಿಚಾರ ತಿಳಿದ ಬಳಿಕ ಆತನಿಂದ ದೂರವಾಗಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಧನುಷ್‌ನ ಸಹೋದರ ಸೂರ್ಯ ಅಮೃತಾಳನ್ನು ಹತ್ಯೆ ಮಾಡಲು ನಿರ್ಧರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಕೆಲಸಕ್ಕೆ ತೆರಳುತ್ತಿದ್ದ ಅಮೃತಾಳನ್ನು ಹಿಂಬಾಲಿಸಿದ ಸೂರ್ಯ, ಗ್ಯಾಸ್ ಲಾರಿ ಹಿಂದೆ ಬಚ್ಚಿಟ್ಟುಕೊಂಡು ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಅಮೃತಾಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪ್ರಕರಣದಲ್ಲಿ ಸೂರ್ಯ ಹಾಗೂ ಧನುಷ್‌ನನ್ನು ಜೀವನಭೀಮಾನಗರ ಠಾಣೆ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

₹50 ಲಕ್ಷ ಲಂಚ ಸ್ವೀಕರಿಸುವಾಗ ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ

ಧಾರವಾಡದಲ್ಲಿ ₹50 ಲಕ್ಷ ಲಂಚದ ಬೇಟೆ..! 1 ಎಕರೆ ಜಮೀನಿಗೂ ಬೇಡಿಕೆ — ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾ ಬಲೆಗೆ..! …

Leave a Reply

Your email address will not be published. Required fields are marked *