Breaking News

ಎಣ್ಣೆ ಜೊತೆ ಮಿಕ್ಸ್ಚರ್ ಕೊಟ್ಟಿಲ್ಲ ಎಂದು ಬಾರ್ ಕ್ಯಾಷಿಯರ್ ನನ್ನೇ ಹತ್ಯೆಗೈದ ದುಷ್ಕರ್ಮಿ

ಎಣ್ಣೆ ಜೊತೆ ಮಿಕ್ಸ್ಚರ್ ಕೊಟ್ಟಿಲ್ಲ ಎಂದು ದುಷ್ಕರ್ಮಿಯೊಬ್ಬ ಬಾರ್ ಕ್ಯಾಷಿಯರ್ ನನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೋಲಾರದಲ್ಲಿ ನಡೆದಿದೆ.ಸುಭಾಷ ಆರೋಪಿ. ಕೊಲೆಯಾದ ಕುಮಾರ್ ಲಕ್ಕೂರು ಗ್ರಾಮದ ವೈನ್ ಶಾಪ್ ನಲ್ಲಿ ಕೆಲಸಮಾಡುತ್ತಿದ್ದ. ಅಲ್ಲಿಗೆ ಬಂದಿದ್ದ ಆರೋಪಿ ಕುಡಿಯುವ ವೇಳೆ ತನಗೆ ಮಿಕ್ಸ್ಚರ್ ಕೇಳಿದ್ದಾನೆ. ಈ ವೇಳೆ ಗಲಾಟೆ ನಡೆದಿದೆ.ಬಳಿಕ ಕ್ಯಾಷಿಯರ್ ಬಾರ್ ಬಂದ್ ಮಾಡಿ ಮನೆಯತ್ತ ತೆರಳಿದ್ದಾನೆ. ಹಿಂಬಾಲಿಸಿಕೊಂಡು ಬಂದ ಆರೋಪಿ ಕ್ಯಾಷಿಯರ್ ನ ಹೆಂಡತಿ ಮಕ್ಕಳ ಎದುರಲ್ಲೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *