Breaking News

ಬಿಹಾರದ ರೆಸ್ಟೋರೆಂಟ್​​ನಲ್ಲಿ ಪೊಲೀಸರಿಂದ ಅಣ್ಣ-ತಂಗಿಗೆ ಕಿರುಕುಳ

ಬಿಹಾರದ ರೆಸ್ಟೋರೆಂಟ್​ನಲ್ಲಿ ಕುಳಿತಿದ್ದ ಅಣ್ಣ-ತಂಗಿಗೆ ಪೊಲೀಸರು ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ಕೂಡಲೇ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಈ ಘಟನೆ ಅಕ್ಟೋಬರ್ 24ರಂದು ನಡೆದಿದೆ.ಎಸ್​ಎಚ್​ಒ ಊಟಕ್ಕೆಂದು ಕುಳಿತಿದ್ದ ಅಣ್ಣ-ತಂಗಿ ಬಳಿ ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.ನಿನ್ನೊಂದಿಗೆ ಕುಳಿತಿರುವವರು ಯಾರು ಎಂದು ಆ ಯುವಕನಿಗೆ ಪ್ರಶ್ನೆ ಮಾಡಿದ್ದಾರೆ, ಆತ ತನ್ನ ತಂಗಿ ಎಂದು ಹೇಳಿದ್ದಾನೆ.ಕೂಡಲೇ ಪೊಲೀಸ್ ಅಧಿಕಾರ ಏರು ಧ್ವನಿಯಲ್ಲಿ ಮಾತನಾಡಲು ಶುರು ಮಾಡಿದ್ದಾರೆ. ಜತೆಗೆ ಇನ್ನೂ ಮೂರು ಪೊಲೀಸರು ಕೂಡ ಅವರೊಂದಿಗೆ ಸೇರಿಕೊಂಡಿದ್ದಾರೆ.ಇಬ್ಬರ ನಡುವೆ ವಾಗ್ವಾದ ನಡೆದಿದೆ. ರೆಸ್ಟೋರೆಂಟ್‌ನಲ್ಲಿರುವ ಇತರ ಗ್ರಾಹಕರು ಘರ್ಷಣೆಯನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದು, ಆದರೆ ಹತ್ತಿರದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *