Breaking News

ಮದ್ದೂರಿನಲ್ಲಿ ಭೀಕರ ಅಪ*ಘಾತ: ಕಾರು ಡಿಕ್ಕಿಯಾದ ರಭಸಕ್ಕೆ ಹಾರಿದ ಗೂಡ್ಸ್ ಆಟೋ

ಮಂಡ್ಯದ ಮದ್ದೂರಿನಲ್ಲಿ ಭಯಾನಕ ಅಪಘಾತ ಸಂಭವಿಸಿದ್ದು, ಗೂಡ್ಸ್ ಆಟೋ ಮತ್ತು ಕಾರ್ ನಡುವೆ ಡಿಕ್ಕಿಯಾಗಿ, ಕಾರು ಡಿಕ್ಕಿಯಾದ ರಭಸಕ್ಕೆ ಗೂಡ್ಸ್ ಆಟೋ ಹಾರಿದೆ.ಮಂಡ್ಯದ ಮದ್ದೂರಿನ ಚಾಮನಹಳ್ಳಿ ಬಳಿ ತಡರಾತ್ರಿ ಈ ಘಟನೆ ನಡೆದಿದ್ದು, ಗೂಡ್ಸ್ ಆಟೋ ಚಾಲಕ ರಾಜುಗೆ ಗಂಭೀರ ಗಾಯವಾಗಿದೆ.ಗಂಭೀರವಾಗಿ ಗಾಯಗೊಂಡ ಆಟೋ ಚಾಲಕನನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇನ್ನು ಈ ಅಪಘಾತ ನಡೆಯುವಾಗ ಅಲ್ಲೇ ಇದ್ದ ಬೈಕ್ ಚಾಲಕ ಸ್ವಲ್ಪದರಲ್ಲೇ ಬಚಾವಾಗಿ ಜೀವ ಉಳಿಸಿಕೊಂಡಿದ್ದಾನೆ. ಈತ ಗೂಡ್ಸ್ ಆಟೋ ಚಾಲಕನ ಬಳಿ ಮಾತನಾಡಿ, ಆಗಷ್ಟೇ ಹೊರಟಿದ್ದು, ಆ ಕ್ಷಣವೇ ವೇಗವಾಗಿ ಬಂದ ಕಾರ್ ಆಟೋಗೆ ಡಿಕ್ಕಿಯಾಗಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Share News

About BigTv News

Check Also

ಬೆಳಗಾವಿಯಲ್ಲಿ ‘ಕರ್ನಾಟಕ ಬಂದ್’ಗೆ ಅಭೂತಪೂರ್ವ ಬೆಂಬಲ : ಧಾರವಾಡದಲ್ಲಿ ನಿಷೇಧಾಜ್ಞೆ ಜಾರಿ

ಬೆಳಗಾವಿ/ಧಾರವಾಡ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಾದ್ಯಂತ ವ್ಯಾಪಕ ಬೆಂಬಲ …

Leave a Reply

Your email address will not be published. Required fields are marked *