Breaking News

ಜಯತೀರ್ಥ ವೃಂದಾವನದ ಬಗ್ಗೆ ಅಪಪ್ರಚಾರ ಹಿನ್ನಲೆ ಭಕ್ತರಿಂದ ಪ್ರತಿಭಟನೆ

ಧಾರವಾಡ 03 : ನವವೃಂದಾವನದಲ್ಲಿರುವ ಉತ್ತರಾಧಿಮಠದ ರಘುವರ್ಯತೀರ್ಥ ಮೂಲ ವೃಂದಾವನವನ್ನೇ ಜಯತೀರ್ಥರ ವೃಂದಾವನ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು , ಕೂಡಲೇ ಇದನ್ನು ತಡೆಯಬೇಕು ಎಂದು ಆಗ್ರಹಿಸಿ ಜಯತೀರ್ಥ ಭಕ್ತವೃಂದದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರದಲ್ಲಿ ಮನವಿ ಸಲ್ಲಿಸಿದರು. ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಭಕ್ತರು , ಅಲ್ಲಿನ ಆರಾಧನೆ ಹಾಗೂ ಪೂಜೆಗಳನ್ನು ತಡೆಯಬೇಕು . ಅಲ್ಲಿ ಇತಿಹಾಸ ತಿರುಚುವ ಕಾರ್ಯ ಆಗುತ್ತಿದೆ . ಜಯತೀರ್ಥ ಭಕ್ತರ ಭಾವನೆಗಳಿಗೆ ಘಾಸಿಯಾಗುತ್ತಿದೆ . ಈ ವಿಷಯದಲ್ಲಿ ಗೊಂದಲ ಸೃಷ್ಟಿಸಲು ಅವಕಾಶ ಮಾಡಿಕೊಡದಂತೆ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *