Breaking News

ಸಿದ್ದರಾಮಯ್ಯನವರು ತಮ್ಮ ಕೇಸ್‌ ಜೊತೆ ಇನ್ನೊಬ್ಬರ ಕೇಸ್ ಹೋಲಿಕೆ ಮಾಡಬಾರದು : ಶೆಟ್ಟ‌ರ್

ಧಾರವಾಡ: ಭೂ ವಂಚನೆ ಸಂಬಂಧ ಈಗಾಗಲೇ ವಿಪಕ್ಷ ನಾಯಕ ಆ‌ರ್.ಅಶೋಕ್ ಕೋರ್ಟ್‌ನಿಂದ ಎಲ್ಲವೂ ಬಗೆಹರಿದಿದೆ ಎಂದಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಕೇಸ್‌ ಜೊತೆ ಇನ್ನೊಬ್ಬರ ಕೇಸ್ ಹೋಲಿಕೆ ಮಾಡಬಾರದು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟ‌ರ್ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಅಶೋಕ್‌ ಅವರು ತಮ್ಮ ಪ್ರಕರಣದ ಬಗ್ಗೆ ಸ್ಪಷ್ಟಿಕರಣ ಸಹ ಕೊಟ್ಟಿದ್ದಾರೆ. ಕೋರ್ಟ್‌ನಲ್ಲೇ ಅಶೋಕ ಅವರ ತಪ್ಪಿಲ್ಲ ಎಂದು ಸಾಬೀತಾಗಿದೆ. ಈಗ ಮುಡಾ ಹಗರಣ ಎದ್ದಿದೆ. ತನಿಖೆಗೆ ಆದೇಶ ಕೂಡ ಆಗಿದೆ. ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ಸಹ ಕೊಡಲಿಲ್ಲ. ಈ ಬಗ್ಗೆಯ ಚರ್ಚೆಯ ಪ್ರಸ್ತಾಪವನ್ನೇ ತಿರಸ್ಕಾರ ಮಾಡಿಸಿದರು ಎಂದರು.

ಎಲ್ಲೋ ಒಂದು ಕಡೆ ಈ ಪ್ರಕರಣದಿಂದ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಧರ್ಮಪತ್ನಿಯ ಹೆಸರನ್ನು ಬೀದಿಗೆ ತರುವ ಕೆಲಸವನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಅವರ ಪತ್ನಿಯ ಹೆಸರನ್ನು ಬೀದಿಗೆ ತಂದವರೇ ಸಿದ್ದರಾಮಯ್ಯನವರು. ಕಾನೂನಿನಲ್ಲಿರುವ 50:50 ನಿಯಮ ಮೀರಿ 14 ಸೈಟ್ ತೆಗೆದುಕೊಂಡಿದ್ದಾರೆ. ರಾಜಕೀಯವಾಗಿ ಮಾತ್ರ ಮಾತನಾಡುತ್ತಿದ್ದಾರೆ. ಆ ಸೈಟ್‌ಗಳ ಬಗ್ಗೆ ವಿವರಣೆಯನ್ನೇ ಕೊಟ್ಟಿಲ್ಲ. ತಪ್ಪುಗಳ ಮೇಲೆ ತಪ್ಪು ಆಗಿವೆ ಎಂದರು.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *