ಯುಪಿಎಸ್‌ಸಿ ತಯಾರಿ ಮಾಡುತಿದ್ದ ಯುವತಿ ಹೃದಯಾಘಾತದಿಂದ ಸಾವು ಕಮಡಿರುವ ಘಟನೆ ಧಾರವಾಡ ನಗರದ ಪುರೋಹಿತ್ ನಗರದಲ್ಲಿ ನಡೆದಿದೆ. 26 ವರ್ಷದ ಜೀವಿತಾ ಕುಸಗೂರ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಮನೆಯಲ್ಲಿ ತಲೆ ಸುತ್ತು ಬರುತ್ತಿದೆ ಎಂದು ಜೀವಿತಾ ಸುಸ್ತಾಗಿ ಕುಳಿತಿದ್ದರು. ತಕ್ಷಣವೇ ಕುಟುಂಬದವರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದರು ಎನ್ನಲಾಗಿದೆ.ಆದರೆ ಜೀವಿತಾ ಮಾರ್ಗ ಮದ್ಯದಲ್ಲೇ ಸಾವು ಕಂಡಿದ್ದಾರೆ. ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿದಾಗ ಹೃದಯಾಘಾತದಿಂದ ಸಾವಾಗಿದೆ ಎಂದು ತಿಳಿಸಿದ್ದಾರೆ.
ದಾವಣಗೆರೆಯಲ್ಲಿಯೂ ಹೃದಯಾಘಾತ ಮರಣ ಮೃದಂಗ ಮುಂದುವರಿದಿದೆ. 22 ವರ್ಷದ ಕಾಲೇಜು ಯುವಕ ಹೃದಯಘಾತಕ್ಕೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ. ಇದ್ದಕ್ಕಿದ್ದಂತೆ ಮನೆಯಲ್ಲಿಯೇ ಕುಸಿದು ಬಿದ್ದಿದ್ದ ಯುವಕನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಕೆಲವೇ ಹೊತ್ತಲ್ಲಿ ಆತ ಸಾವು ಕಂಡಿದ್ದಾನೆ. ಅಕ್ಷಯ್, ಉದ್ಯಮಿ ರೇಖಾ ಮುರುಗೇಶ್ ಅವರ ಪುತ್ರ. ದಾವಣಗೆರೆ ನಗರದ ಜಯನಗರ ಮನೆಯಲ್ಲಿ ಯುವಕ ಕುಸಿದು ಬಿದ್ದಿದ್ದ. ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣದಲ್ಲಿ ಯುವಕ ಸಾವು ಕಂಡಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

