ಕೂಡ್ಲಿಗಿ: ಆಂದ್ರಪ್ರದೇಶದ ರಾಯದುಗ೯ ಬಳಿಯ ಸೋಮಲಾಪುರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಗೋಪುರಕ್ಕೆ ನೂತನ ಕಳಸ ಪ್ರತಿಷ್ಠಾಪನೆ ಕಾಯ೯ಕ್ರಮ ಜರುಗಿತು.ಧಾಮಿ೯ಕ ವಿಧಿ ವಿಧಾನಗಳೊಂದಿಗೆ ಕಾಯ೯ಕ್ರಮ ಜರುಗಿಸಲಾಯಿತು.ಸೋಮಲಾಪುರಗ್ರಾಮದ ಸುತ್ತಲಿನಗ್ರಾಮಗಳ ಹಾಗೂ ರಾಯದುಗ೯ ಭಾಗದ ಸಾವಿರಾರು ಭಕ್ತರು ಸೇರಿದಂತೆ ವಿವಿದ ಜಿಲ್ಲೆಗಳ.ನೆರೆ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರೆಂದು ಪ್ರತ್ಯಕ್ಷದಶಿ೯ ಕೂಡ್ಲಿಗಿಯ ದಿನಪತ್ರಿಕೆಗಳ ಏಜಂಟ್ ಹಾಗೂ ವರದಿಗಾರ ಕೆ.ಎಸ್.ಮುರುಳೀಧರಶೆಟ್ರುತಿಳಿಸಿದ್ದಾರೆ. ನೆರೆದಭಕ್ತರು ಕಾಯ೯ಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಕಾಯ೯ಕ್ರಮವನ್ನು ಯಶಸ್ವೀಗೊಳಿಸೋ ಮೂಲಕ ಶ್ರೀ ಆಂಜನೇಯಸ್ವಾಮಿ ಕೃಪೆಗೆ ಪಾತ್ರರಾಗಿದ್ದಾರೆ. ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428
bigtvnews | Hubli Dharwad News | Kannada News | Karnataka News Hubli News | News In Hubli | Local news





