Breaking News

ಕನ್ನಡಿಗ ಐಪಿಎಸ್ ಗೆ ಒಲಿದ ಬೆಂಗಳೂರು ಕಮೀಷನರ್ ಹುದ್ದೆ- ರಾಣೆಬೆನ್ನೂರು ಮೂಲದ ಬಿ.ದಯಾನಂದ ಹೆಸರು ಫೈನಲ್

ಬೆಂಗಳೂರು : ವರ್ಷದ ಕೊನೆ ದಿನ ಪೊಲೀಸ್ ಇಲಾಖೆಯಲ್ಲಿ ಭಾರೀ ಬದಲಾವಣೆಯಾಗಲಿದೆ ಎನ್ನುವುದು ಖಚಿತವಾಗಿದೆ. ಆಡಳಿತಯಂತ್ರದಲ್ಲಿ ಬದಲಾವಣೆ ತರಲು ಸಿಎಂ ತೀರ್ಮಾನ ಮಾಡಿದ್ದಾರೆ.

ಕನ್ನಡಿಗ ಐಪಿಎಸ್ ಅಧಿಕಾರಿಗೆ ಒಲಿದ ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆ ಒಲಿಯುವುದು ಪಕ್ಕಾ ಆಗಿದೆ. ಬಿ.ದಯಾನಂದ್ ಹೆಸರು ಬೆಂಗಳೂರು ಪೊಲೀಸ್ ಆಯುಕ್ತರ ಹುದ್ದೆಗೆ ಬಹುತೇಕ ಫೈನಲ್ ಆಗಿದ್ದು, ಅಧಿಕೃತ ಆದೇಶ ಹೊರ ಬೀಳುವುದಷ್ಟೇ ಬಾಕಿ ಇದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ಬಿ.ದಯಾನಂದ್ ಸದ್ಯ ಗುಪ್ತಚರ ಇಲಾಖೆ ಎಡಿಜಿಪಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಮಿಷನರ್ ಹುದ್ದೆಗೆ ಎಡಿಜಿಪಿ ದರ್ಜೆ‌ ಅಧಿಕಾರಿಗಳಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಉಮೇಶ್ ಕುಮಾರ್, ಅಲೋಕ್ ಕುಮಾರ್ , ಬಿ ದಯಾನಂದ್ ನಡುವೆ ಪೈಪೋಟಿ ಇದೆ. ರೋಕ್ಷವಾಗಿ ಸಿಎಂ ಬೊಮ್ಮಾಯಿ ಮೇಲೆಯೂ ಅಧಿಕಾರಿಗಳು ಒತ್ತಡ ತಂದಿದ್ದಾರೆ. ಸಂಘಪರಿವಾರದ ಮೂಲಕ ಸಿಎಂ ಮೇಲೆ‌ ಒತ್ತಡ ಹಾಕಿಸಿದ್ದಾರೆ ಎನ್ನುವ ವದಂತಿಯೂ ಜೋರಾಗಿ ಹಬ್ಬಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *