Breaking News

ಆಟೋ ರಿಕ್ಷಾದಲ್ಲಿ ಎಂ.ಡಿ.ಎಂ.ಎ. ಪತ್ತೆ; ಇಬ್ಬರ ಬಂಧನ

ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 28.32 ಗ್ರಾಂ ಎಂ.ಡಿ.ಎಂ.ಎ. ಪತ್ತೆ ಹಚ್ಚಿ ಈ ಸಂಬಂಧ ಮುಳಿಯಾರು ಮಾಸ್ತಿಕುಂಡಿನ ಕ್ವಾರ್ಟರ್ಸ್ ನಲ್ಲಿ ವಾಸಿಸುವ ಕೆ.ಉಸ್ಮಾನ್‌ ಯಾನೆ ಚಾರ್ಲಿ ಉಸ್ಮಾನ್‌ (43) ಮತ್ತು ಮಧೂರು ಶಿರಿಬಾಗಿಲು ಬದರ್‌ ಜುಮಾ ಮಸೀದಿ ಸಮೀಪದ ಕುಳತ್ತಿಂಗರ ಹೌಸ್‌ನ ಎಂ.ಅಬ್ದುಲ್‌ ರಹ್ಮಾನ್‌(55)ನನ್ನು ಬಂಧಿಸಿದ್ದಾರೆ.ಶಿರಿಬಾಗಿಲಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಪೆರಿಯಡ್ಕ ಭಾಗದಿಂದ ಬಂದ ಆಟೋ ರಿಕ್ಷಾ ನಿಲ್ಲಿಸುವಂತೆ ಸೂಚಿಸಿದರೂ ನಿಲ್ಲಿಸದೆ ಪರಾರಿಯಾಗಿತ್ತು. ಪೊಲೀಸರು ಬೆನ್ನಟ್ಟಿ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಎಂಡಿಎಂಎ ಪತ್ತೆಯಾಯಿತು. ಪರಾರಿಯಾಗಲೆತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದರು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *