Breaking News

ಮನೆ ಕಳವು ದೃಶ್ಯ ಲೈವ್ ವೀಕ್ಷಿಸಿದ ಯಜಮಾನ!

ಕಾಸರಗೋಡು: ಉದುಮ ಮಾಂಗಾಡ್‌ನಲ್ಲಿ ಅಲೆಮಾರಿಗಳು ಶನಿವಾರ ಹಗಲು ವೇಳೆಯಲ್ಲಿಯೇ ಯಾರೂ ಇಲ್ಲದ ಒಂದು ಮನೆಯ ಆವರಣದ ಒಳಗೆ ಪ್ರವೇಶಿಸಿ ಕಳ್ಳತನ ನಡೆಸಿದ್ದಾರೆ. ಮನೆ ಮಾಲಕ ದುಬೈಯಲ್ಲಿ ಕುಳಿತುಕೊಂಡು ಊರಿನಲ್ಲಿರುವ ತನ್ನ ಮನೆಯಲ್ಲಿ ನಡೆದ ಕಳ್ಳತನದ ಲೈವ್ ವೀಕ್ಷಿಸಿದ್ದಾರೆ!ಈ ಸಂದರ್ಭ ಮನೆಮಂದಿ ಎಲ್ಲರೂ ಹೊರಗೆ ತೆರಳಿದ್ದರು. ಮನೆ ನೋಡಿಕೊಳ್ಳುತ್ತಿದ್ದ ವ್ಯಕ್ತಿಯೂ ಇರಲಿಲ್ಲ. ಮನೆಗೆ ಹೊಸ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಿರುವ ಹಿನ್ನೆಲೆಯಲ್ಲಿ ಹಳೆಯ ಯಂತ್ರದ ಭಾಗಗಳನ್ನು ಅಂಗಳದಲ್ಲಿ ಇಡಲಾಗಿತ್ತು. ಮನೆಯಲ್ಲಿ ಜನರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಅಲೆಮಾರಿಗಳು ಗೇಟ್ ತೆಗೆದು ಒಳಗೆ ಆಗಮಿಸಿ ಆ ಯಂತ್ರದ ಭಾಗಗಳನ್ನು ಕದ್ದೊಯ್ದಿದ್ದಾರೆ.

Share News

About BigTv News

Check Also

ವಿಜಯನಗರ : ಕ್ಷುಲ್ಲಕ ಕಾರಣಕ್ಕೆ ಗಲಾಟೆ – ರುಬ್ಬುಗುಂಡಿನ ಕಲ್ಲಿನಿಂದ ಹೊಡೆದು ಯುವಕನ ಭೀಕರ ಕೊಲೆ

ಹೊಸಪೇಟೆ: ನಗರದ ಸಿದ್ದಲಿಂಗಪ್ಪ ಚೌಕಿಯ 4ನೇ ಕ್ರಾಸ್‌ನ ಎಲ್ಲಮ್ಮ ದೇವಸ್ಥಾನದ ಬಳಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ …

Leave a Reply

Your email address will not be published. Required fields are marked *