ಕಾರ್ಕಳದಿಂದ ಹೆಬ್ರಿ ಕಡೆಗೆ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ಮಂಗಳವಾರ ಸಂಭವಿಸಿದೆ.ಕಾರ್ಕಳದ ಪಂಚಾಯತ್‌ರಾಜ್ ವಿಭಾಗದ ಎಂಜಿನಿಯರ್ ಸದಾನಂದ ನಾಯ್ಕ್ ಹಾಗೂ ಪತ್ನಿ ಮಗು ಗಾಯಗೊಂಡವರು.ಹಿರ್ಗಾನ ಗ್ರಾಮದ ಮೂರೂರು ಬಳಿ ಸದಾನಂದ ನಾಯ್ಕ್ ತನ್ನ ಕಾರಿನಲ್ಲಿ ಪತ್ನಿ ಹಾಗೂ ಮಗುವಿನ ಜತೆಗೆ ತಮ್ಮ ಮನೆ ಬ್ರಹ್ಮಾವರದ ಚಾಂತಾರಿಗೆ ಹೊರಟಿದ್ದರು. ಮುರೂರು ಬಳಿ ಏಕಾಏಕಿ ಸೈಕಲ್ ಸವಾರ ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿತು. ಗಾಯಾಳುಗಳನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

