Breaking News

ಆಹಾ.. ಚೋರ್ ಗುರು.. ಚಂಡಾಲ್ ಶಿಷ್ಯ..! – ಎಕ್ಸಾಂ ಪಾಸ್ ಆಗಲು ಇವರ ಒಪ್ಪಂದ ನೋಡಿ

ಧಾರವಾಡ : SSLC ಪರೀಕ್ಷೆ ವೇಳೆ ಸಹಾಯ ಮಾಡ್ತೀನಿ ಎಂದು ನಂಬಿಸಿ ವಿದ್ಯಾರ್ಥಿಇಂದ ಟೀಚರ್ ಒಬ್ಬ ಬಂಗಾರದ ಸರ ಪಡೆದಿರೋ ಆರೋಪ ಕೇಳಿಬಂದಿದೆ. ಧಾರವಾಡದ ಕೆ.ಇ. ಬೋರ್ಡ್‌ ಸಂಸ್ಥೆಯ ವಿದ್ಯಾರಣ್ಯ ಶಾಲೆಯ ಶಿಕ್ಷಕ ರಾಜಶೇಖರ್‌, ಅದೇ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯಿಂದ ಸುಮಾರು 80 ಗ್ರಾಂ ಚಿನ್ನದ ಆಭರಣ ಹಾಗೂ ಹಣ ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ.ವೈಯಕ್ತಿಕ ಕಾರಣಕ್ಕೆ ಸಮಸ್ಯೆಯಲ್ಲಿ ಸಿಲುಕಿದ್ದೇನೆ. ಹಣ ಅಥವಾ ಚಿನ್ನದ ಆಭರಣ ತಂದುಕೊಡು ನಂತರ ವಾಪಸ್‌ ಕೊಡುತ್ತೇನೆಂದು ನಂಬಿಸಿ ಶಿಕ್ಷಕ ಆಭರಣ ಪಡೆದಿದ್ದಾನೆ. ವಿದ್ಯಾರ್ಥಿಯು ಮನೆಯಲ್ಲಿ ಯಾರೂ ಇಲ್ಲದ ವೇಳೆ 80 ಗ್ರಾಂ ಆಭರಣ ತಂದುಕೊಟ್ಟಿರುವುದು ವಿದ್ಯಾರ್ಥಿಯ ಪೋಷಕರಿಗೆ ಗೊತ್ತಾದ ಬಳಿಕ ಸಂಗತಿ ಬಹಿರಂಗವಾಗಿದೆ. ವಿದ್ಯಾರ್ಥಿ ಪೋಷಕರು ಸದ್ಯ ಉಪನಗರ ಪೊಲೀಸರಿಗೆ ದೂರು ಸಲ್ಲಿಸಿದ್ದು, ಖಾಕಿಪಡೆ ಹೆಚ್ಚಿನ ತನಿಖೆ ಕೈಗೊಂಡಿದೆ. ವಿದ್ಯಾರ್ಥಿ ಹಾಗೂ ಪೋಷಕರ ಆರೋಪವನ್ನು ತಳ್ಳಿಹಾಕಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *