ಬೆಳಗಾವಿ:- ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಳಿಹೊಸುರ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ಕಾರಣವಾಗಿ ಬೆಂಕಿ ಹೊತ್ತಿದ್ದು, ಮೂರು ಮನೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.ಈ ಬೆಂಕಿಯಿಂದ ಬಾಳೇಶ್ ಹಜೇರಿ, ಲಕ್ಷ್ಮಣ ಡವಳೆ, ಕಿರಣ ಹಜೇರಿ ಅವರ ಮನೆಗಳಿಗೆ ಹಾನಿ ಸಂಭವಿಸಿದೆ.ಮನೆಗಳಲ್ಲಿ ಇದ್ದ ದಿನಬಳಕೆ ವಸ್ತುಗಳು, ಚಿನ್ನಾಭರಣ ಮತ್ತು ನಗದು ಸಹ ಬೆಂಕಿಗೆ ಆರ್ಭಟವಾಗಿದೆ. ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಾಥಮಿಕ ತನಿಖೆ ಪ್ರಾರಂಭವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

