ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಂಬಂಧಿಕರೋರ್ವರ ಮನೆಗೆ ರಜೆಯಲ್ಲಿ ಬಂದಿದ್ದ 13 ರ ಹರೆಯದ ಬಾಲಕನಿಗೆ 16 ರ ಹರೆಯದ ಬಾಲಕ ಸಲಿಂಗರತಿ ಕಿರುಕುಳ ನೀಡಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.ಘಟನೆಗೆ ಸಂಬಂಧಿಸಿದಂತೆ 16 ರ ಬಾಲಕನ ವಿರುದ್ಧ ಫೋಕ್ಸೋ ಕೇಸು ದಾಖಲಿಸಲಾಗಿದೆ.ಕೊಯಿಲಾಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮೂಲತ: ದೂರು ನೀಡಿದಾತನ ಮನೆಯಿಂದ ಕಳೆದ ರಜೆಯಲ್ಲಿ ಆದೂರಿಗೆ ತಲುಪಿದ್ದ. ಈ ಸಮಯದಲ್ಲಿ ಸಂಬಂಧಿಕನಾದ 16 ರ ಹರೆಯದ ಬಾಲಕನ ಜೊತೆ ನಿದ್ದೆ ಮಾಡಿದ್ದ ಸಂದರ್ಭದಲ್ಲಿ ಸಲಿಂಗರತಿ ಕಿರುಕುಳ ನೀಡಿದ್ದಾಗಿ 13 ರ ಬಾಲಕ ದೂರು ನೀಡಿದ್ದಾನೆ. ಈ ಬಗ್ಗೆ ಕೊಯಿಲಾಂಡಿ ಪೊಲೀಸರು ಕೇಸು ದಾಖಲಿಸಿ, ಘಟನೆ ಆದೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಕೇಸನ್ನುಆದೂರು ಠಾಣೆಗೆ ಹಸ್ತಾಂತರಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

