ಮದುವೆಯಾಗಿ ಮೂರೇ ತಿಂಗಳಿಗೆ ನವ ವಿವಾಹಿತೆ ಆತ್ಮಹತ್ಯೆ – ಪತಿಯ ಕುಟುಂಬದ ವಿರುದ್ದ ದೂರು!ಮದುವೆ ಆಗಿ ಮೂರೇ ತಿಂಗಳಿಗೆ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Crime news) ಬ್ಯಾಡರಹಳ್ಳಿ ಪೊಲೀಸ್ ಠಾಣವ್ಯಾಪ್ತಿಯ ವಿದ್ಯಾಮಾನ ನಗರದಲ್ಲಿ ನಡೆದಿದೆ. ಅಮೂಲ್ಯ(23)ನೇಣಿಗೆ ಶರಣಾದ ನವವಿವಾಹಿತೆಯಾಗಿದ್ದು, ಆಕೆಯ ಪೋಷಕರು ಪತಿಯ ಕುಟುಂಬದವರೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.ಅಂದ್ರಹಳ್ಳಿಯಲ್ಲಿ ಅಮೂಲ್ಯ ವಾಸವಿದ್ದು, ವಿದ್ಯಾಮಾನ್ಯ ನಗರದಲ್ಲಿ ಅಭಿಶೇಕ್ ವಾಸವಿದ್ದರು. ಅಕ್ಕಪಕ್ಕದ ಏರಿಯಾದಲ್ಲಿ ಇವರಿಬ್ಬನ ನಡುವೆ ಪ್ರೀತಿ ಅಂಕುರಿಸುತ್ತು. ಮೂರು ತಿಂಗಳ ಹಿಂದೆ ಮನೆಯವರನ್ನ ಒಪ್ಪಿಸಿ ಇಬ್ಬರು ಮದುವೆ ಆಗಿದ್ದರು. ಬುಧವಾರಕ್ಕೆ ಅಮೂಲ್ಯ ಅಭಿಶೇಕ್ (30) ಇಬ್ಬರೂ ಮದುವೆಯಾಗಿ ಆಗಿ 3 ತಿಂಗಳು ಕಳೆದಿತ್ತು. ಆದರೆ ಏಕಾಏಕಿ ಅಭಿಶೇಕ್ ಮನೆಯಲ್ಲಿ ಅಮೂಲ್ಯ ನೇಣಿಗೆ ಶರಣಾಗಿದ್ದಾಳೆ. ಅಮೂಲ್ಯ ಆತ್ಮಹತ್ಯೆಗೆ ಇದುವರೆಗೂ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಅಭಿಶೇಕ್ ಕುಟುಂಬದವರೇ ನಮ್ಮ ಮಗಳ ಸಾವಿಗೆ ಕಾರಣ ಎಂದು ಅಮೂಲ್ಯ ಕುಟುಂಬದವರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

