Breaking News

ತಂಬಾಕು ಮಾರಾಟ ಅಂಗಡಿ ಮೇಲೆ ದಾಳಿ: 40 ಪ್ರಕರಣ ದಾಖಲು

ಬೆಳಗಾವಿ: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್‌ ಇಲಾಖೆಯು ನಗರದಲ್ಲಿ ಸೋಮವಾರ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿದವು. ಕೋಟ್ಪಾ-2003 ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿ 40 ಪ್ರಕರಣ ದಾಖಲಿಸಿ, ತಪ್ಪಿತಸ್ಥರಿಗೆ ದಂಡ ವಿಧಿಸಲಾಯಿತು. ಜತೆಗೆ, ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಅನುಮತಿ ಪಡೆಯದೆ ತಾಲ್ಲೂಕಿನ ಸುಳೇಬಾವಿ ಗ್ರಾಮದ ಹೊಸಕೇರಿ ಗಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಮದುವೆ ಕಾರ್ಯಕ್ರಮದ ಅಂಗವಾಗಿ ಭಾನುವಾರ ಡಾಲ್ಬಿ ಸಿಸ್ಟಮ್‌ ಸಿಸ್ಟಮ್‌ ಬಳಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಡಿ, ಮೂವರ ವಿರುದ್ಧ ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳೇಬಾವಿಯ ಸುರೇಶ ಬಂಗನ್ನವರ, ರೋಹಿತ ಲಕ್ಕನಗೌಡರ, ಬೈಲಹೊಂಗಲ ತಾಲ್ಲೂಕಿನ ಸೋಮನಟ್ಟಿಯ ವೀರಭದ್ರ ಯರಗುದ್ದಿ ವಿರುದ್ಧ ದೂರು ದಾಖಲಾಗಿದ್ದು, ಡಾಲ್ಬಿ ಸೌಂಡ್‌ ಸಿಸ್ಟಮ್‌, ಟ್ರ್ಯಾಕ್ಟರ್‌ ಟ್ರಾಲಿ, ಜನರೇಟರ್‌ ವಶಕ್ಕೆ ಪಡೆಯಲಾಗಿದೆ.

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *