ಸುರತ್ಕಲ್ ಬೀಚ್‌ನಲ್ಲಿ ಆಡುತ್ತಿದ್ದ ವೇಳೆ ಬೃಹತ್ ತೆರೆ ಅಪ್ಪಳಿಸಿ ನೀರು ಪಾಲಾಗಿದ್ದು ಓರ್ವ ಮೃತಪಟ್ಟು, ಇನ್ನೋರ್ವ ನಾಪತ್ತೆಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ.ಬೀಚ್‌ನಲ್ಲಿ ಈಜಾಡಿ ಸಂಜೆ 5.30ಕ್ಕೆ ಹಿಂದಿರುಗಲು ಸಿದ್ಧವಾಗಿದ್ದರು. ಜತೆಗಿದ್ದ ಪ್ರಖ್ಯಾತ್ ಅವರು ರಸ್ತೆ ಬದಿ ಬರಲು ತಿಳಿಸಿ ಕಾರು ತರಲು ತೆರಳಿದರು. ಈ ಸಂದರ್ಭದಲ್ಲಿ ಈ ಇಬ್ಬರೂ ಕೊನೆಯ ಬಾರಿ ಒಮ್ಮೆ ಈಜಿ ಬರೋಣ ಎಂದು ವಾಪಸು ಸಮುದ್ರಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಪ್ರಬಲವಾದ ತೆರೆ ಬಂದದ್ದನ್ನು ತಿಳಿಯುವಲ್ಲಿ ವಿಫಲರಾದರು. ಅದರ ಪರಿಣಾಮ ತೆರೆಯ ಹೊಡೆತಕ್ಕೆ ಸಿಲುಕಿದರು.ಸಂಬಂಧಿಕರು ಗ್ಯಾನ್ ಅಪಾಯದಲ್ಲಿರುವುದನ್ನು ಕಂಡು ಕೂಡಲೇ ಸ್ಥಳೀಯರ ಸಹಾಯದಿಂದ ದಡಕ್ಕೆ ಎಳೆದು ತಂದರು. ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಿದರಾದರೂ, ಪ್ರಯೋಜನವಾಗಲಿಲ್ಲ.
ಈಗ ಸಂಭ್ರಮದಲ್ಲಿರಬೇಕಾದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು ಹೆತ್ತವರ, ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

