ಉತ್ತರ ಪ್ರದೇಶ : ಇಲ್ಲಿನ ಮೀರತ್‌ನಲ್ಲಿ ರಾತ್ರಿ ಪಾಳಿಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪತ್ತೆಯಾದ ಅಪರಿಚಿತ ಶವವನ್ನು ಮತ್ತೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೊಂಡೊಯ್ದು ಹಾಕಿ ಸಿಕ್ಕಿಬಿದ್ದಿದ್ದಾರೆ.ಡಿ.5 ರಂದು ಈ ಘಟನೆ ನಡೆದಿದ್ದು, ಇಬ್ಬರು ಸಿಬ್ಬಂದಿ ಹೀಗೆ ಅಪರಿಚಿತ ಶವವನ್ನು ತಮ್ಮ ವ್ಯಾಪ್ತಿಗೆ ಒಳಪಡುವ ಗಡಿಯಿಂದ ಹೊರಗೆ ಹಾಕುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಂಡಿದ್ದು ಸಬ್-ಇನ್ಸ್‌ಪೆಕ್ಟರ್ ಮತ್ತು ಕಾನ್‌ಸ್ಟೆಬಲ್ ರನ್ನು ಅಮಾನತುಗೊಳಿಸಲಾಗಿದೆ. ಈ ರೀತಿಯ ಘಟನೆಗಳು ನಡೆದಾಗ ಕೂಡಲೇ ಸಿಬ್ಬಂದಿ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು, ನಂತರ ಕಾನೂನು ವಿಧಿವಿಧಾನಗಳನ್ನು ಪಾಲಿಸಬೇಕು. ಆದ್ರೆ ಇಲ್ಲಿ ತಾವು ಜವಾಬ್ದಾರಿಯಿಂದ ಟಪ್ಲಿಸಿಕೊಳ್ಳುವ ಸಲುವಾಗಿ ತಮ್ಮದೇ ಪೊಲೀಸ್ ಠಾಣೆಯ ಲಿಮಿಟ್ ನಲ್ಲಿ ಶವ ಪತ್ತೆಯಾಗಿದ್ದರೂ ಅದನ್ನು ಬೇರೆಡೆಗೆ ಸಾಗಿಸಿದ ಕಾರ್ಯ ಕಾನೂನು ಬಾಹಿರ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

