ಮನೆಗಳ್ಳತನ ಸೇರಿದಂತೆ ಕಾರು ಬೈಕ್ ಗಳು ಕಳುವಾಗಿರುವ ಸಾಕಷ್ಟು ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿರುತ್ತವೆ. ಆದ್ರೆ ಬೆಂಗಳೂರಿನಲ್ಲಿ ಲಾರಿಗಳ ಕಳ್ಳತನವಾಗಿದೆ. ಹೌದು ನಗರದಲ್ಲಿ ಸುಮಾರು 10ಕ್ಕೂ ಹೆಚ್ಚು ಲಾರಿ ಮಾಲೀಕರು ತಮ್ಮ 25ಕ್ಕೂ ಅಧಿಕ ಲಾರಿಗಳು ಕಳ್ಳತನ ಆಗಿದೆ ಎಂದಿದ್ದಾರೆ.ಕೆಲಸಕ್ಕೆ ಬರುವ ನೆಪದಲ್ಲಿ ಒಂದಷ್ಟು ದಿನ ಜೊತೆಗಿದ್ದು, ಆ ಬಳಿಕ ಖದೀಮರು ಲಾರಿ ಕದ್ದು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಲಾರಿ ಮಾಲೀಕರು ಆರೋಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

