Breaking News

ಕದಂಬ ನೌಕಾನೆಲೆಗೆ ಸೇರಿದ ಸಶಸ್ತ್ರ ಸಂಗ್ರಹಾಲಯದಲ್ಲಿ ಭಾರೀ ಸ್ಫೋಟ! ಮನೆಗಳಲ್ಲಿ ಬಿರುಕು

ಹಟ್ಟಿಕೇರಿ ವಜ್ರಕೋಶದ ಕದಂಬ ನೌಕಾನೆಲೆಗೆ ಸೇರಿದ ಸಶಸ್ತ್ರ ಸಂಗ್ರಹಾಲಯದಲ್ಲಿ ಭಾರೀ ಸ್ಫೋಟ ಕಾಣಿಸಿಕೊಂಡಿದೆ. ಇದರಿಂದಾಗಿ ಇದರ ಪಕ್ಕದ ಪಕ್ಕದಲ್ಲೇ ಅಲಗೇರಿ ಗ್ರಾಮದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.ಈ ಭಾಗದಲ್ಲಿ ಕಾಮಗಾರಿ ಕೂಡ ನಡೆಯುತ್ತಿದ್ದು, ಸ್ಥಳದಲ್ಲಿ ಸ್ಫೋಟ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ಇದಲ್ಲದೆ ಮದ್ದು ಗುಂಡು ಸಂಗ್ರಹಾಲಯದಲ್ಲಿ ಅವಧಿ ಮೀರಿದ ಮದ್ದುಗುಂಡುಗಳು ನಿಷ್ಕ್ರಿಯ ಮಾಡಲು ಸ್ಫೋಟ ನಡೆಸಲಾಗುತ್ತದೆ ಎಂದು ತಿಳಿದಿದ್ದು, ಇದಾವುದರ ಬಗ್ಗೆಯು ಇಲ್ಲಿಯ ಅಧಿಕಾರಿಗಳು ನಿಖರ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿದಿದೆ. ಆದರೆ ಈ ಸ್ಫೋಟದಿಂದ ಮಾತ್ರ ಸಮಿಪದ ಮನೆಗಳಿಗೆ ಹಾನಿ ಉಂಟಾಗಿರುವುದರಿಂದ ಬಡ ಜನ ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಬಂದಿದೆ.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *